AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Janardhan Death: ಬ್ಯಾಂಕ್ ಜನಾರ್ಧನ್ ವೃತ್ತಿ ಜೀವನ ಬದಲಿಸಿದ್ದು ಆ ಇಬ್ಬರು ವ್ಯಕ್ತಿಗಳು

ಬ್ಯಾಂಕ್ ಜನಾರ್ಧನ್ ನಿಧನ: ಹಿರಿಯ ಕನ್ನಡ ನಟ ಬ್ಯಾಂಕ್ ಜನಾರ್ಧನ್ ಅವರು 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು, ನಾಟಕದ ಮೂಲಕ ಚಿತ್ರರಂಗ ಪ್ರವೇಶಿಸಿ, ಹಾಸ್ಯ ಪಾತ್ರಗಳಿಂದ ಜನಪ್ರಿಯರಾದರು. ಧೀರೇಂದ್ರ ಗೋಪಾಲ್ ಮತ್ತು ಕಾಶೀನಾಥ್ ಅವರ ಸಹಕಾರದಿಂದ ಅವರ ಚಿತ್ರರಂಗ ಜೀವನ ಉತ್ತುಂಗಕ್ಕೇರಿತು. 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅನೇಕರ ಮನ ಗೆದ್ದರು.

Bank Janardhan Death: ಬ್ಯಾಂಕ್ ಜನಾರ್ಧನ್ ವೃತ್ತಿ ಜೀವನ ಬದಲಿಸಿದ್ದು ಆ ಇಬ್ಬರು ವ್ಯಕ್ತಿಗಳು
ಬ್ಯಾಂಕ್ ಜನಾರ್ಧನ್
ರಾಜೇಶ್ ದುಗ್ಗುಮನೆ
|

Updated on:Apr 14, 2025 | 7:53 AM

Share

ಹಿರಿಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ಅವರು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ವಿಜಯ ಬ್ಯಾಂಕ್​ನಲ್ಲಿ ಕೆಲಸ ಮಾಡಿಕೊಂಡಿದ್ದವರು. ನಂತರ ನಟನೆ ಕಡೆಗೆ ಆಸಕ್ತಿ ಬೆಳೆಯಿತು. ಆರಂಭದಲ್ಲಿ ನಾಟಕ ಮಾಡಿಕೊಂಡಿದ್ದ ಅವರು, ಸಿನಿಮಾಗಳಲ್ಲಿ ಮಿಂಚಿದರು. ಹಾಸ್ಯ ಪಾತ್ರಗಳ ಮೂಲಕ ಜನಾರ್ಧನ್ ಅವರು ಗಮನ ಸೆಳೆದರು. ಬ್ಯಾಂಕ್ ಜನಾರ್ಧನ್ ಅವರು ಚಿತ್ರರಂಗಕ್ಕೆ ಬರೋಕೆ ಕಾರಣ ಆಗಿದ್ದು ಧೀರೇಂದ್ರ ಗೋಪಾಲ್ ಅವರು ಕೊಟ್ಟ ಆಫರ್. ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಕ್ಕೆ ಕಾರಣ ಆಗಿದ್ದು, ಕಾಶೀನಾಥ್ ಅವರು.

ಜನಾರ್ಧನ್ ಅವರು ಎಸ್​ಎಸ್​ಎಲ್​ಸಿ ಪಾಸ್ ಆಗಿದ್ದರು. ಆಗಿನ ಕಾಲಕ್ಕೆ ಅವರಿಗೆ ಬ್ಯಾಂಕ್​ನಲ್ಲಿ ಕೆಲಸ ಸಿಕ್ಕಿತು. ಇವುಗಳ ಜೊತೆ ಅವರು ನಾಟಕಗಳಲ್ಲಿ ನಟಿಸಿದರು. ಚಿತ್ರದುರ್ಗದ ಹೊಳಲ್​ಕೆರೆಯಲ್ಲೇ ವಾಸವಾಗಿದ್ದ ಅವರು, ‘ಗೌಡರ ಗದ್ದಲ’ ನಾಟಕ ಮಾಡಿದರು. ಇದರಲ್ಲಿ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡರು. ಒಂದು ದಿನ ಇವರ ನಾಟಕವನ್ನು ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ನೋಡಿದರು. ಚಿತ್ರರಂಗಕ್ಕೆ ನೀವು ಬರಬೇಕು ಎಂದು ಆಹ್ವಾನ ಕೊಟ್ಟರು. ಕೆಲ ಸಮಯ ಬಿಟ್ಟು ಜನಾರ್ಧನ್ ಅವರು ಧೀರೇಂದ್ರ ಗೋಪಾಲ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಆದರು.

ಜನಾರ್ಧನ್ ನಟಿಸಿದ ಮೊದಲ ಸಿನಿಮಾ ‘ಊರಿಗೆ ಉಪಕಾರಿ’. ವಿಷ್ಣುವರ್ಧನ್ ಜೊತೆ ಅವರ ಕಾಂಬಿನೇಷನ್ ಇತ್ತು. ಮೊದಲ ಚಿತ್ರದಲ್ಲೇ ಉತ್ತಮವಾಗಿ ನಟಿಸಿದರು. ಅಚ್ಚರಿಯ ವಿಚಾರ ಎಂದರೆ ಬ್ಯಾಂಕ್​ನಲ್ಲಿ ಕೆಲಸ ಮಾಡಿಕೊಂಡೇ ಜನಾರ್ಧನ್ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಅವರು ಬೆಂಗಳೂರಿಗೆ ಟ್ರಾನ್ಸ್​ಫರ್ ಮಾಡಿಸಿಕೊಂಡರು. ಕೊನೆಗೆ ಬ್ಯಾಂಕ್​​ಗೆ ಸರಿಯಾಗಿ ಹೋಗದೆ ಸಂಬಳವೇ ಇಲ್ಲದಂತಾಗಿ ಹೋಯಿತು.

ಇದನ್ನೂ ಓದಿ
Image
ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ; 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ  
Image
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
Image
‘ಯುದ್ಧಕಾಂಡ’ ವೇದಿಕೆಯಲ್ಲಿ ಅಪ್ಪನ ತ್ಯಾಗದ ವಿಷಯ ತೆರೆದಿಟ್ಟ ರವಿಚಂದ್ರನ್
Image
ಫಿಲ್ಮ್ ಫೆಸ್ಟಿವಲ್​ಗಳಲ್ಲಿ ಗಮನ ಸೆಳೆದ ‘ಗ್ರೀನ್’ ಸಿನಿಮಾ

ಇದನ್ನೂ ಓದಿ: ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ; 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ  

ಸಣ್ಣಪುಟ್ಟ ಪಾತ್ರಗಳೇ ಆಗಿದ್ದರಿಂದ ಜನಾರ್ಧನ್ ಅವರಿಗೆ ಬೇಸರ ಆಯಿತು. ಯಾವುದೇ ನಟನೆ ಮಾಡಬಾರದು ಎಂದು ಅವರು ನಿರ್ಧರಿಸಿದರು. ನಂತರ ಅವರು ಆರು ತಿಂಗಳು ಬ್ಯಾಂಕ್​ನಲ್ಲಿ ಕೆಲಸ ಮಾಡಿದರು. ಇದರಿಂದ ಪ್ರಮೋಷನ್ ಕೂಡ ಸಿಕ್ಕಿತು ಆ ಸಂದರ್ಭದಲ್ಲಿ ಕಾಶೀನಾಥ್ ಅವರು ‘ಅಜಗಜಾಂತರ’ ಹೆಸರಿನ ಸಿನಿಮಾ ಮಾಡಿದರು. ಇದಕ್ಕೆ ಬ್ಯಾಂಕ್ ಜನಾರ್ಧನ್ ಅವರಿಗೆ ಆಫರ್​ ಕೊಟ್ಟರು. ಅಲ್ಲಿಂದ ಅವರ ವೃತ್ತಿ ಜೀವನ ಬದಲಾಗಿ ಹೋಯಿತು. ಇದರಿಂದ ಜನಾರ್ಧನ್ ಅವರ ಎರಡನೇ ಇನ್ನಿಂಗ್ಸ್ ಆರಂಭ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 am, Mon, 14 April 25

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ