ಬೆಂಗಳೂರು ನಗರದಲ್ಲಿಂದು ಸಾಯಂಕಾಲ ಮಳೆ, ಬೇಸಿಗೆಯ ತಾಪದಿಂದ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್
ಮಳೆಯಿಂದ ಆಶ್ರಯ ಪಡೆಯಲು ಜನ ಅಂಗಡಿ ಮುಂಗಟ್ಟುಗಳನ್ನು, ಫ್ಲೈಓವರ್ಗಳ ಕೆಳಭಾಗವನ್ನು ಆಶ್ರಯಿಸಿಕೊಳ್ಳುವುದು ಸಾಮಾನ್ಯ ದೃಶ್ಯ. ಇವತ್ತು ಡಾ ಬಿಅರ್ ಅಂಬೇಡ್ಕರ್ ಅವರ ಜನ್ಮ ವಾರ್ಷಿಕೋತ್ಸವದ ನಿಮಿತ್ತ ವಿಧಾನಸೌಧ ಮುಂದೆ ಪ್ರತಿವರ್ಷದಂತೆ ಈ ಸಲವೂ ದೊಡ್ಡ ದೊಡ್ಡ ಪೆಂಡಾಲ್ಗಳನ್ನು ಹಾಕಲಾಗಿತ್ತು, ಜನ ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲಿ ಆಶ್ರಯ ಪಡೆದರು.
ಬೆಂಗಳೂರು, ಏಪ್ರಿಲ್ 14: ಮಧ್ಯಾಹ್ನ ಬಿಸಿಲಿಂದ ಧಗಧಗಿಸುತ್ತಿದ್ದ ಬೆಂಗಳೂರು ಮಹಾನಗರ ಸಾಯಂಕಾಲ ಸುರಿದ ಮಳೆಗೆ ತಂಪಾಯಿತು ಮಾರಾಯ್ರೇ. ನಗರ ಹಲವಾರು ಭಾಗಗಳಲ್ಲಿ ಸಾಧಾರಣ ಮತ್ತು ಹಗುರ ಮಳೆಯಾಗಿದೆ. ಮೆಜೆಸ್ಟಿಕ್ ಏರಿಯ, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಕೆಅರ್ ಸರ್ಕಲ್, ಕೆಆರ್ ಮಾರ್ಕೆಟ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಶಾಂತಿನಗರ, ವಿಲ್ಸನ್ ಗಾರ್ಡನ್, ಜಯನಗರ ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ಸಾಮಾನ್ಯ ಜನಜೀವನ ಮತ್ತು ವಾಹನ ಸಂಚಾರ ಕೊಂಚಮಟ್ಟಿಗೆ ಪ್ರಭಾವಕ್ಕೊಳಗಾಗಿದ್ದವು.
ಇದನ್ನೂ ಓದಿ: Karnataka Rains: ಬೆಂಗಳೂರಿನಲ್ಲಿ ಇಂದು ಧಾರಾಕಾರ ಮಳೆ ಸಾಧ್ಯತೆ, ಕರ್ನಾಟಕದ 20 ಜಿಲ್ಲೆಗಳಿಗೆ ಅಲರ್ಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?

VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
