ಮೋದಿ ಪ್ರಧಾನಿಯಾಗುವವರೆಗೂ ಚಪ್ಪಲಿ ಧರಿಸಲ್ಲ ಎಂದಿದ್ದ ರಾಮಪಾಲ್ಗೆ ಶೂ ಕೊಟ್ಟ ಪಿಎಂ
ಹರಿಯಾಣದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವವರೆಗೂ ನಾನು ಶೂ ಧರಿಸುವುದಿಲ್ಲ ಎಂದು 14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದ ಕೈತಾಲ್‌ನ ರಾಮ್‌ಪಾಲ್ ಕಶ್ಯಪ್ ಅವರನ್ನು ಭೇಟಿಯಾದರು. ಈ ವೇಳೆ ಮೋದಿಯೇ ರಾಮಪಾಲ್ ಅವರಿಗೆ ಶೂಗಳನ್ನು ಧರಿಸುವಂತೆ ಮಾಡಿದರು. ಪ್ರಧಾನಿ ಇಂದು ಯಮುನಾ ನಗರವನ್ನು ತಲುಪಿದರು, ಅಲ್ಲಿ ಅವರು ರಾಂಪಾಲ್ ಕಶ್ಯಪ್ ಎಂಬ ವ್ಯಕ್ತಿಗೆ ಪಾದರಕ್ಷೆಗಳನ್ನು ನೀಡುವ ಮೂಲಕ ಸನ್ಮಾನಿಸಿದರು.
ಚಂಡೀಗಢ, ಏಪ್ರಿಲ್ 14: ಹರಿಯಾಣದ ಕೈತಾಲ್‌ನ ರಾಮಪಾಲ್ ಕಶ್ಯಪ್ (Rampal Kashyap) 14 ವರ್ಷಗಳ ಹಿಂದೆ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗುವವರೆಗೂ ಶೂ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅದರಂತೆ ಅವರು ಬರಿಗಾಲಿನಲ್ಲಿಯೇ ನಡೆಯುತ್ತಿದ್ದರು. 2014 ರಲ್ಲಿ ಪ್ರಧಾನಿ ಮೋದಿ ಪ್ರಧಾನಿಯಾದರು. ರಾಮಪಾಲ್ ಕಶ್ಯಪ್ ಅವರ ಆಸೆ ಈಡೇರಿದರೂ ಅವರಿಗೆ ಮೋದಿಯವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮೋದಿಯವರನ್ನು ಭೇಟಿಯಾದ ನಂತರವೇ ಚಪ್ಪಲಿ ಧರಿಸಲು ಕಶ್ಯಪ್ ಕಾಯುತ್ತಿದ್ದರು.
ಇಂದು ಹರಿಯಾಣಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವಿಷಯ ತಿಳಿದಾಗ ಅವರು ರಾಮಪಾಲ್ ಕಶ್ಯಪ್ ಅವರನ್ನು ಭೇಟಿ ಮಾಡಲು ಖುದ್ದಾಗಿ ಫೋನ್ ಮಾಡಿ ತಾವೇ ಸ್ವತಃ ಶೂ ಧರಿಸುವಂತೆ ಒತ್ತಾಯಿಸಿದ್ದಾರೆ. ರಾಮಪಾಲ್ ಕಶ್ಯಪ್ಗೆ ಪ್ರಧಾನಿ ಮೋದಿ ಪ್ರೀತಿಯಿಂದ ಶೂಗಳನ್ನು ನೀಡಿದ್ದಾರೆ. ತಮ್ಮನ್ನು ಭೇಟಿಯಾಗಲು ಬರಿಗಾಲಿನಲ್ಲಿಯೇ ಬಂದ ಅಭಿಮಾನಿ ರಾಮಪಾಲ್ ಕಶ್ಯಪ್ ಅವರ ಬಳಿ ಮಾತನಾಡಿದ ಪ್ರಧಾನಿ ಮೋದಿ, “ನೀವು ಯಾಕೆ ಹೀಗೆ ಮಾಡಿದಿರಿ? ನೀವು ಯಾಕೆ ತೊಂದರೆ ಮಾಡಿಕೊಂಡಿರಿ?” ಎಂದು ಕೇಳಿದ್ದಾರೆ. ಹಾಗೇ, ಹೊಸ ಶೂಗಳನ್ನು ರಾಮಪಾಲ್ ಅವರಿಗೆ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಇದು ಬಹಳ ಭಾವನಾತ್ಮಕ ವಿಷಯವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ