ಸಹೋದ್ಯೋಗಿಯನ್ನು ಕೊಲ್ಲುವ ಉದ್ದೇಶದಿಂದ ಬಂದಿದ್ದ ಅರೋಪಿ ಪ್ರವೀಣ್ ಚೌಗುಲೆ ಮನೆಯಲ್ಲಿದ್ದವರನ್ನೆಲ್ಲ ಕೊಂದ: ಡಾ ಅರುಣ್ ಕೆ, ಎಸ್ ಪಿ-ಉಡುಪಿ

|

Updated on: Nov 23, 2023 | 12:19 PM

ಆರೋಪಿ ಕೊಲ್ಲುವ ನಿರ್ಧಾರ ಮಾಡಿ ಆಯುಧದೊಂದಿಗೆ ಆಕೆಯ ಮನೆಗೆ ಬಂದಿದ್ದಾನೆ. ಮೊದಲಿಗೆ ತನ್ನ ಸಹೋದ್ಯೋಗಿಯನ್ನು ಇರಿದು ಕೊಂದ ಅವನು ಆಕೆಯ ಚೀತ್ಕಾರ ಕೇಳಿ ತಾಯಿ ಹೊರಬಂದಾಗ ಅವರನ್ನು ಅದೇ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಮತ್ತೊಂದು ಕೋಣೆಯಲ್ಲಿದ್ದ ಯುವತಿಯ ಅಕ್ಕ ಆಕ್ರಂದನ ಕೇಳಿ ಆಚೆ ಬಂದಾಗ ಮೂರನೇ ಬಲಿ ಪಡೆದಿದ್ದಾನೆ.

ಉಡುಪಿ: ಎರಡು ವಾರಗಳ ಹಿಂದೆ ನಗರದ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನೇಜಾರು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಪ್ರವೀಣ್ ಚೌಗುಲೆಯನ್ನು (Parveen Chougule) ಇಂದು ನಗರದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕೆ (Dr Arun K SP ) ಸುದ್ದಿಗೋಷ್ಟಿಯೊಂದನ್ನು ನಡೆಸಿ ಪೊಲೀಸ್ ವಿಚಾರಣೆಯಲ್ಲಿ (police interrogation) ಅರೋಪಿಯು ಹತ್ಯೆಗೈದ ಉದ್ದೇಶ ಬಾಯ್ಬಿಟ್ಟಿದನ್ನು ವಿವರಿಸಿದರು. ಆರೋಪಿ ಮತ್ತು ಹತ್ಯೆಯಾದವರ ಪೈಕಿ ಒಬ್ಬ ಯುವತಿ ಸಹೋದ್ಯೋಗಿಗಳಾಗಿದ್ದ ಕಾರಣ ಅವರ ನಡುವೆ ಸ್ನೇಹ ಬೆಳೆದಿತ್ತು. ಪ್ರವೀಣ್ ಒಂದಷ್ಟು ಸಹಾಯವನ್ನು ಯುವತಿಗೆ ಮಾಡಿದ್ದನಂತೆ. ಆದರೆ, ಸುಮಾರು ಒಂದು ತಿಂಗಳು ಹಿಂದೆ ಯುವತಿ ಪ್ರವೀಣ್ ನನ್ನು ನಿರ್ಲಕ್ಷಿಸಲಾರಂಭಿಸಿದ್ದರಿಂದ ಆಕೆಯ ಬಗ್ಗೆ ಪೊಸ್ಸೆಸ್ಸಿವ್ ಆಗಿದ್ದ ಆರೋಪಿ ಕೊಲ್ಲುವ ನಿರ್ಧಾರ ಮಾಡಿ ಆಯುಧದೊಂದಿಗೆ ಆಕೆಯ ಮನೆಗೆ ಬಂದಿದ್ದಾನೆ.

ಮೊದಲಿಗೆ ತನ್ನ ಸಹೋದ್ಯೋಗಿಯನ್ನು ಇರಿದು ಕೊಂದ ಅವನು ಆಕೆಯ ಚೀತ್ಕಾರ ಕೇಳಿ ತಾಯಿ ಹೊರಬಂದಾಗ ಅವರನ್ನು ಅದೇ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಮತ್ತೊಂದು ಕೋಣೆಯಲ್ಲಿದ್ದ ಯುವತಿಯ ಅಕ್ಕ ಆಕ್ರಂದನ ಕೇಳಿ ಆಚೆ ಬಂದಾಗ ಮೂರನೇ ಬಲಿ ಪಡೆದಿದ್ದಾನೆ. ಇವೆರೆಲ್ಲರ ಚೀತ್ಕಾರ, ಕೂಗು ಕೇಳಿ ಹೊರಗಡೆ ಆಡುತ್ತಿದ್ದ ಯುವತಿಯ 12 ವರ್ಷದ ತಮ್ಮ ಮನೆಯೊಳಗೆ ಓಡಿಬಂದಾಗ ಅರೋಪಿಯು ಬಾಲಕನನ್ನೂ ಕೊಂದಿದ್ದಾನೆ ಎಂದು ಎಸ್ ಪಿ ಡಾ ಅರುಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on