ನಾಲ್ವರ ಕೊಲೆ ಮಾಡಿದ್ದನ್ನು ಪ್ರವೀಣ್ ಚೌಗುಲೆ ಒಪ್ಪಿಕೊಂಡಿದ್ದಾನೆ, ಅವನ ತಪ್ಪೊಪ್ಪಿಗೆಯನ್ನು ಪ್ರಮಾಣೀಕರಿಸಬೇಕಿದೆ: ಉಡುಪಿ ಪೊಲೀಸ್ ವರಿಷ್ಠಾಧಿಕಾರಿ

ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2023 | 6:08 PM

ರವಿವಾರ ಬೆಳಗ್ಗೆ ಉಡುಪಿಯ ಮಲ್ಪೆ ಬಳಿಯ ನೆಜಾರ್ ನಲ್ಲಿರುವ ತೃಪ್ತಿನಗರದಲ್ಲಿ ವಾಸವಾಗಿದ್ದ ಹಸೀನಾ (46) ಎನ್ನುವವರ ಮನೆ ಹೊಕ್ಕಿದ್ದ ಚೌಗುಲೆ, ಹಸೀನಾ ಮತ್ತು ಅವರ ಮೂರು ಮಕ್ಕಳಾದ ಅಫ್ನಾನ್ (23), ಐನಾಜ್ (21) ಮತ್ತ್ತು 12 ವರ್ಷದ ಬಾಲಕ ಅಸಿಮ್ ನನ್ನು ಚಾಕುವೊಂದರಿಂದ ಇರಿದು ಹತ್ಯೆ ಮಾಡಿದ್ದ ಎಂದು ಆರೋಪಿಸಲಾಗಿದೆ.

ಉಡುಪಿ: ಕೇವಲ ಉಡುಪಿ ಮಾತ್ರವಲ್ಲ ಇಡೀ ರಾಜ್ಯಾವನ್ನೇ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ (Praveen Chougule) ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರೂ, ಅವನ ಹೇಳಿಕೆಯನ್ನು ಪ್ರಮಾಣೀಕರಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್  ಕೆ (Dr Arun K) ಹೇಳಿದರು. ಪೊಲೀಸರು ಚೌಗುಲೆಯ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಅರುಣ್, ಕೊಲೆಗಳ ಹಿಂದಿನ ಉದ್ದೇಶ ಏನು ಅನ್ನೋದು ಗೊತ್ತಾಗಿಲ್ಲ, ಅವನ ಹೇಳಿಕೆಯ ಪ್ರಕಾರ ಯಾವುದೋ ವೈಷಮ್ಯದಿಂದ ಅವನು, ಐನಾಜ್ (Aynaz) ಹೆಸರಿನ ಯುವತಿಯನ್ನು ಕೊಲ್ಲಲು ಅವರ ಮನೆ ನುಗ್ಗಿದ್ದ; ಅದರೆ ಮನೆಯಲ್ಲಿದ್ದವರು ಅಕೆಯ ರಕ್ಷಣೆಗೆ ಧಾವಿಸಿದಾಗ ಉಳಿದ ಮೂವರನ್ನು ಕೊಲೆಗೈದ ಎಂದು ಹೇಳಿದರು. ರವಿವಾರ ಬೆಳಗ್ಗೆ ಉಡುಪಿಯ ಮಲ್ಪೆ ಬಳಿಯ ನೆಜಾರ್ ನಲ್ಲಿರುವ ತೃಪ್ತಿನಗರದಲ್ಲಿ ವಾಸವಾಗಿದ್ದ ಹಸೀನಾ (46) ಎನ್ನುವವರ ಮನೆ ಹೊಕ್ಕಿದ್ದ ಚೌಗುಲೆ, ಹಸೀನಾ ಮತ್ತು ಅವರ ಮೂರು ಮಕ್ಕಳಾದ ಅಫ್ನಾನ್ (23), ಐನಾಜ್ (21) ಮತ್ತ್ತು 12 ವರ್ಷದ ಬಾಲಕ ಅಸಿಮ್ ನನ್ನು ಚಾಕುವೊಂದರಿಂದ ಇರಿದು ಹತ್ಯೆ ಮಾಡಿದ್ದ ಎಂದು ಆರೋಪಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.