AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಎಸ್.​ಪಿ ಬಿಚ್ಚಿಟ್ಟ ರೋಚಕ ಸಂಗತಿ?

ಉಡುಪಿ(Udupi)ಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದರು. ಹೌದು, ಈ ಪ್ರಕರಣ ಕುರಿತು ಇದೀಗ ಉಡುಪಿ ಎಸ್​ಪಿ ಸುದ್ದಿಗೋಷ್ಠಿ ಕರೆದಿದ್ದು, ಹತ್ಯೆಯ ಕುರಿತು ಸತ್ಯಾಂಶ ತಿಳಿಸಿದ್ದಾರೆ.

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಎಸ್.​ಪಿ ಬಿಚ್ಚಿಟ್ಟ ರೋಚಕ ಸಂಗತಿ?
ಬಂಧಿತ ಆರೋಪಿ
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 15, 2023 | 6:37 PM

ಉಡುಪಿ, ನ.15: ಉಡುಪಿ(Udupi) ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ಇದೇ ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆ ನಡೆದಿತ್ತು. ಹೌದು, ಆರೋಪಿ ಹತ್ಯೆ ಮಾಡಿದ ಬಳಿಕ ಪೊಲೀಸರಿಗೆ ಸುಳಿವು ಸಿಗದಂತೆ ಉಡುಪಿ ನಗರದೊಳಗೆ ನಾಲ್ಕು ಬಾರಿ ವಾಹನ ಬದಲಾಯಿಸಿ ಪರಾರಿಯಾಗಿದ್ದ. ಈ ಹಿನ್ನಲೆ ಆರೋಪಿಯನ್ನು ಕಂಡುಹಿಡಿಯಲು ಪೊಲೀಸರು ತಡಕಾಡುವಂತಾಗಿತ್ತು. ನಂತರ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಕೊಲೆಗಾರನ ಪತ್ತೆಗೆ ಬಲೆ ಬೀಸಿದ್ದರು. ಕೊನೆಗೆ ಹಂತಕನನ್ನು ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉಡುಪಿ ಎಸ್.ಪಿ ಡಾ.ಅರುಣ್ ಪತ್ರಿಕಾಗೋಷ್ಠಿ ಕರೆದಿದ್ದು, ಹತ್ಯೆಯ ಕುರಿತು ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ.

ಒಬ್ಬಳ ಮೇಲಿನ ದ್ವೇಷದಿಂದ ನಡೆಯಿತಾ ನಾಲ್ವರ ಕೊಲೆ?

ಇನ್ನು ಈ ಕುರಿತು ಮಾತನಾಡಿದ ಎಸ್​ಪಿ ಡಾ.ಅರುಣ್ ‘​ ನಾಲ್ವರ ಹತ್ಯೆಯನ್ನು ಮಾಡಿರುವುದಾಗಿ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಒಪ್ಪಿಕೊಂಡಿದ್ದಾರೆ. ಮೇಲ್ನೋಟಕ್ಕೆ ಹತ್ಯೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆಯಿದೆ. ಸಂಪೂರ್ಣ ತನಿಖೆ ಮಾಡದೆ ಕಾರಣ ಹೇಳಲು ಸಾಧ್ಯವಿಲ್ಲ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ. ಅವನ ಉದ್ದೇಶ ಆಯ್ನಾಸ್ ಕೊಲೆ ಮಾಡುವುದಾಗಿತ್ತು. ಆದರೆ, ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಮತ್ತು ಸಾಕ್ಷಿ ನಾಶ ಮಾಡಲು ಉಳಿದವರನ್ನು ಕೊಲೆ ಮಾಡಿರುವ ಬಗ್ಗೆಯೋ ಒಪ್ಪಿಕೊಂಡಿದ್ದಾನೆ ಎಂದರು.

ಇದನ್ನೂ ಓದಿ:ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಕೇಸ್: ಒಬ್ಬಳ ಮೇಲಿನ ದ್ವೇಷ ನಾಲ್ವರನ್ನ ಹತ್ಯೆಗೈದಿದ್ದ ಹಂತಕ ಮಾಜಿ ಪೊಲೀಸ್

ಮದುವೆಯಾಗಿ ಮಕ್ಕಳಾಗಿದ್ರು ಅಯ್ನಾಸ್ ಮೇಲೆ ಲವ್

ಹೌದು, ಪೊಲೀಸರ ವಿಚಾರಣೆ ವೇಳೆ ಆರೋಪಿ ಪ್ರವೀಣ್ ಅರುಣ್ ಚೌಗಲೆ ಸತ್ಯಾಂಶ ಬಿಚ್ಚಿಟ್ಟಿದ್ದು, ‘ಸ್ನೇಹ, ಸಲುಗೆ, ಪ್ರೇಮ ಮತ್ತು ಹಣದ ವಿಚಾರದಿಂದ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಮದುವೆಯಾಗಿ ಮಕ್ಕಳಾಗಿದ್ರು ಅಯ್ನಾಸ್ ಮೇಲೆ ಆರೋಪಿಗೆ ಲವ್ ಆಗಿತ್ತು. ಆಯ್ನಾಸ್ ಕೂಡ ಪ್ರವೀಣ್ ಜೊತೆ ಸಲುಗೆಯಿಂದ ಇದ್ದಳು. ಈ ವಿಚಾರವನ್ನು ಅಯ್ನಾಸ್‌ ಲೈಟ್ ಆಗಿ ಸ್ವೀಕರಿಸದ್ದರೆ, ಆರೋಪಿ ಪ್ರವೀಣ್ ಮಾತ್ರ ತನ್ನ ಪ್ರೀತಿಯನ್ನು ಗಂಭೀರವಾಗಿ ಪರಿಣಗಣಿಸಿದ್ದ. ಈ ಮಧ್ಯೆ ಇಬ್ಬರ ನಡುವೆ ಹಣದ ವ್ಯವಹಾರ ಕೂಡ ನಡೆದಿದ್ದು, ಈ ವಿಚಾರ ಎರಡು ಕುಟುಂಬಕ್ಕೂ ಗೊತ್ತಾಗಿ ಗಲಾಟೆ ಕೂಡ ಆಗಿತ್ತು.

ಮೃತ ಅಯ್ನಾಸ್ ಜೊತೆ ಜಗಳವಾಡಿದ್ದ ಆರೋಪಿ ಪ್ರವೀಣ್ ನ ಪತ್ನಿ

ಇನ್ನು ಮನೆಯವರ ಗಲಾಟೆಯ ನಡುವೇಯೇ ಆರೋಪಿ ಪ್ರವೀಣ್ ಪತ್ನಿ, ಮೃತ ಅಯ್ನಾಸ್ ಜೊತೆ ಜಗಳವಾಡಿದ್ದರು. ಇದಾದ ಬಳಿಕ ಅಯ್ನಾಸ್ ಪ್ರವೀಣ್​ನನ್ನು ರಿಜೆಕ್ಟ್ ಮಾಡಿದ್ದಳು. ಈ ಹಿನ್ನಲೆ ಆಕೆಯನ್ನು ಕೊಲ್ಲುವ ನಿರ್ಧಾರ ಮಾಡಿದ್ದಾನೆ. ಅದರಂತೆ ನ.12 ರಂದು ಮನೆಗೆ ನುಗ್ಗಿ ಆಕೆಯನ್ನು ಹತ್ಯೆ ಮಾಡಲು ಮುಂದಾಗಿದ್ದ, ಈ ವೇಳೆ ಅಕೆಯ ಕೊಲೆಗೆ ಅಡ್ಡಪಡಿಸಿದವರನ್ನೆಲ್ಲರನ್ನು ಕೂಡ ಕೊಂದಿದ್ದಾಗಿ ಆರೋಪಿ ಪ್ರವೀಣ್ ಹೇಳಿದ್ದಾನೆ.

ಆರೋಪಿಯನ್ನು ಬಂಧಿಸಿದ್ದೇ ರೋಚಕ

ಹೌದು, ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿ, ಯಾವುದೇ ಸಾಕ್ಷಿ ಬಿಡದೇ ಪರಾರಿಯಾಗಿದ್ದ ಹಂತಕನನ್ನು ಬಂಧಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇನ್ನು ಈ ಆರೋಪಿಯನ್ನು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹ ಮಾಡಿ ಬಂಧಿಸಿದ್ದೇವೆ. ಇಂದೇ ಆರೋಪಿ ಪ್ರವೀಣ್​ನನ್ನು ಕೋರ್ಟ್​ಗೆ ಹಾಜರುಪಡಿಸುತ್ತೇವೆ. ಅಯ್ನಾಝ್, ಚೌಗುಲೆ ನಡುವಿನ ಸಂಬಂಧ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಇನ್ನು ಆರೋಪಿ ಪ್ರವೀಣ್ ಚೌಗುಲೆಗೆ ಮದುವೆಯಾಗಿದೆ ಎಂದು ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಹೇಳಿದರು.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Wed, 15 November 23