ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಕೇಸ್: ಒಬ್ಬಳ ಮೇಲಿನ ದ್ವೇಷ ನಾಲ್ವರನ್ನ ಹತ್ಯೆಗೈದಿದ್ದ ಹಂತಕ ಮಾಜಿ ಪೊಲೀಸ್

ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರ ಕೊಲೆ ಮಾಡಿದ ಬಂಧಿತ ಆರೋಪಿ ಪ್ರವೀಣ್ ಚೌಗಲೆ ಈ ಹಿಂದೆ​ ಪೊಲೀಸ್ ಇಲಾಖೆಯಲ್ಲಿದ್ದ. ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸ್ ಆಗಿದ್ದ ಪ್ರವೀಣ್ ಕೆಲಸಕ್ಕೆ ಸೇರಿದ್ದ ಮೂರೇ ತಿಂಗಳಲ್ಲಿ ರಾಜೀನಾಮೆ ನೀಡಿ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. 10 ವರ್ಷದಿಂದ ಏರ್​ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಕೇಸ್: ಒಬ್ಬಳ ಮೇಲಿನ ದ್ವೇಷ ನಾಲ್ವರನ್ನ ಹತ್ಯೆಗೈದಿದ್ದ ಹಂತಕ ಮಾಜಿ ಪೊಲೀಸ್
ಮೃತ ಅಯ್ನಾಜ್, ಆರೋಪಿ ಪ್ರವೀಣ್ ಚೌಗಲೆ
Follow us
TV9 Web
| Updated By: ಆಯೇಷಾ ಬಾನು

Updated on:Nov 15, 2023 | 1:44 PM

ಉಡುಪಿ, ನ.15: ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ (Udupi 4 Murder) ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಚೌಗಲೆಯನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಉಡುಪಿಯಿಂದ ಪರಾರಿಯಾಗಿದ್ದ ಆರೋಪಿ ಬೆಳಗಾವಿಯ ಕುಡಚಿಯ ಸಂಬಂಧಿ ಮನೆಯಲ್ಲಿ ಆಶ್ರಯ ಪಡೆದಿದ್ದ. ಮೊಬೈಲ್​​ ಟವರ್​ ಲೊಕೇಶನ್​​​ ಆಧರಿಸಿ ಉಡುಪಿ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಕಡಲ ಕಿನಾರೆಯಲ್ಲಿ ರಕ್ತದ ಕೊಡಿ ಹರಿಸಿದ ಹಂತಕನನ್ನ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸ್ತಿದ್ದಾರೆ. ಸದ್ಯ ಆರೋಪಿ ಈ ಹಿಂದೆ ಪೊಲೀಸ್ ಆಗಿ ಕೆಲಸ ಮಾಡಿದ್ದು ತಿಳಿದು ಬಂದಿದೆ. ಜೊತೆಗೆ ಕೊಲೆ ಹಿಂದಿನ ಅನೇಕ ಸಂಗತಿಗಳು ಬಯಲಾಗುತ್ತಿವೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಜ್ಞಾತ ಸ್ಥಳದಲ್ಲಿ ಆರೋಪಿ ಪ್ರವೀಣ್ ಚೌಗಲೆ ವಿಚಾರಣೆ

ಇನ್ನು, ನಿನ್ನೆಯೇ ಹಂತಕ ಪ್ರವೀಣ್ ಚೌಗಲೆಯನ್ನ ಬಂಧಿಸಿದ್ದ ಪೊಲೀಸರು, ಇವತ್ತು ಬೆಳಗ್ಗೆ 4 ಗಂಟೆಗೆ ಉಡುಪಿಗೆ ಕರೆತಂದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಆರೋಪಿ ಪ್ರವೀಣ್​​ನನ್ನ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯಾಹ್ನದ ಬಳಿಕ ಹಂತಕನನ್ನ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಹಂತಕ ಮಾಜಿ ಪೊಲೀಸ್

ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರ ಕೊಲೆ ಮಾಡಿದ ಬಂಧಿತ ಆರೋಪಿ ಪ್ರವೀಣ್ ಚೌಗಲೆ ಈ ಹಿಂದೆ​ ಪೊಲೀಸ್ ಇಲಾಖೆಯಲ್ಲಿದ್ದ. ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸ್ ಆಗಿದ್ದ ಪ್ರವೀಣ್ ಕೆಲಸಕ್ಕೆ ಸೇರಿದ್ದ ಮೂರೇ ತಿಂಗಳಲ್ಲಿ ರಾಜೀನಾಮೆ ನೀಡಿ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. 10 ವರ್ಷದಿಂದ ಏರ್​ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ; ಕುಡಚಿಯಲ್ಲಿ ಆರೋಪಿ ಚೌಗಲೆ ಬಂಧನ

ಒಬ್ಬಳ ಮೇಲಿನ ದ್ವೇಷ-ನಾಲ್ವರ ಬಲಿ ಪಡೆದ ಹಂತಕ

ಮಂಗಳೂರು ಏರ್ ಪೋರ್ಟ್ ನಲ್ಲಿ ಏರ್ ಇಂಡಿಯಾ ಸಿಬ್ಬಂದಿಯಾಗಿದ್ದ ಹಂತಕ ಪ್ರವೀಣ್ ಹತ್ಯೆಯಾದ ಅಯ್ನಾಜ್ ಸಹೋದ್ಯೋಗಿಯಾಗಿದ್ದ. ಅಯ್ನಾಜ್ ಮತ್ತು ಪ್ರವೀಣ್ ಗೆ ಹಲವು ವರ್ಷಗಳ ಪರಿಚಯವಿತ್ತು. ಭಾನುವಾರ ಮುಂಜಾನೆ ಮಂಗಳೂರಿನಿಂದ ಉಡುಪಿಗೆ ಬಂದು. ಅಯ್ನಾಜ್ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾಗ ಮನೆಗೆ ನುಗ್ಗಿದ ಕೊಲೆ ಮಾಡಿದ್ದಾನೆ. ಅಯ್ನಾಜ್ ಮೃತ ಹಸೀನಾಳ ಎರಡನೇ ಮಗಳು. ಮೊದಲಿಗೆ ಹಂತಕ ಅಯ್ನಾಜ್ ಕೊಲೆ ಮಾಡಿ ಬಳಿಕ ಉಳಿದ ಮೂವರ ಹತ್ಯೆ ಮಾಡಿದ್ದಾನೆ. ಆ ಕ್ಷಣದಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಇತ್ತ ತನಿಖೆ ಆರಂಭಿಸಿದ್ದ ಉಡುಪಿ ಪೊಲೀಸರು ಅಯ್ನಾಜ್ ಸಹೋದ್ಯೋಗಿಗಳ ಪೈಕಿ ಪ್ರವೀಣ್ ಮೊಬೈಲ್ ಮಾತ್ರ ಸ್ವಿಚ್ ಆಫ್ ಆಗಿದ್ದನ್ನು ಗಮನಿಸಿ ಪ್ರವೀಣ್ ಬಗ್ಗೆಯೇ ಜಾಸ್ತಿ ಗಮನ ಹರಿಸಿದ್ರು. ಮಂಗಳವಾರ ಮಧ್ಯಾಹ್ನ ಪ್ರವೀಣ್ ಮೊಬೈಲ್ ಆನ್ ಮಾಡುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆಗೆ ಸಹಾಯವಾಗಿದ್ದು ಬೆಳಗಾವಿ ಮತ್ತು ಉಡುಪಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ನರಹಂತಕ ಪ್ರವೀಣ್ ಲಾಕ್ ಆಗಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:30 pm, Wed, 15 November 23

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ