ಉಡುಪಿಯಲ್ಲಿ ನಾಲ್ವರ ಭೀಕರ ಕೊಲೆ; ಹಂತಕನ ಜಾಡು ಹಿಡಿದಿದ್ದು ಹೇಗೆ ಗೊತ್ತಾ?
ಸುಳಿವೇ ಕೊಡದ ಹಂತಕನನ್ನು ಬೆನ್ನು ಬಿದ್ದ ಪೊಲೀಸರು, ಎಸ್ಪಿ ಡಾ. ಅರುಣ್ ಕುಮಾರ್ ನೇತೃತ್ವದಲ್ಲಿ 5 ತಂಡವನ್ನು ರಚಿಸಿ ತನಿಖೆ ಆರಂಭಿಸುತ್ತಾರೆ. ಮೊದಲು ಇದೊಂದು ಕೌಟುಂಬಿಕ ಕಲಹ ಹಿನ್ನಲೆ ನಡೆದ ಹತ್ಯೆ ಎಂದು ಭಾವಿಸಿ, ಆ ರೀತಿಯಲ್ಲಿ ತನಿಖೆ ಆರಂಭಿಸಿದರು. ಆದರೆ, ಯಾವುದೇ ಸುಳಿವು ಸಿಗಲಿಲ್ಲ, ಬಳಿಕ ಮೃತರಲ್ಲಿ ಒಬ್ಬರಾದ ಆಯ್ನಾಸ್ ಹಿನ್ನಲೆ ಕೆದಕಿ, ಅವರ ಸಂಪೂರ್ಣ ಮಾಹಿತಿಯನ್ನು ಹೊರತೆಗೆದಿದ್ದಾರೆ.
ಉಡುಪಿ, ನ.15: ಇದೇ ತಿಂಗಳ ನ.12 ರಂದು ಉಡುಪಿ(Udupi)ಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬೆಳಗಾವಿ(Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಿದ್ದರು. ಇಂದು ಆರೋಪಿಯನ್ನು ವಿಚಾರಣೆ ನಡೆಸಿದ ಪೊಲೀಸರು, ಆತನನ್ನು ಕೋರ್ಟ್ಗೆ ಹಾಜರುಪಡಿಸಿದ್ದರು. ಬಳಿಕ ಉಡುಪಿ ಜೆಎಂಎಫ್‌ಸಿ ಕೋರ್ಟ್ 14 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ. ಇನ್ನು ಈ ಹಂತಕನನ್ನು ಬಂಧಿಸಿದ್ದೇ ರೋಚಕವಾಗಿದ್ದು, ಈ ಕುರಿತು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
ಸುಳಿವೇ ಕೊಡದ ಹಂತಕನನ್ನು ಹೇಗೆ ಬಂಧಿಸಲಾಯಿತು ಗೊತ್ತಾ?
ಹೌದು, ಸುಳಿವೇ ಕೊಡದ ಹಂತಕನನ್ನು ಬೆನ್ನು ಬಿದ್ದ ಪೊಲೀಸರು, ಎಸ್ಪಿ ಡಾ. ಅರುಣ್ ಕುಮಾರ್ ನೇತೃತ್ವದಲ್ಲಿ 5 ತಂಡವನ್ನು ರಚಿಸಿ ತನಿಖೆ ಆರಂಭಿಸುತ್ತಾರೆ. ಮೊದಲು ಇದೊಂದು ಕೌಟುಂಬಿಕ ಕಲಹ ಹಿನ್ನಲೆ ನಡೆದ ಹತ್ಯೆ ಎಂದು ಭಾವಿಸಿ, ಆ ರೀತಿಯಲ್ಲಿ ತನಿಖೆ ಆರಂಭಿಸಿದರು. ಆದರೆ, ಯಾವುದೇ ಸುಳಿವು ಸಿಗಲಿಲ್ಲ, ಬಳಿಕ ಮೃತರಲ್ಲಿ ಒಬ್ಬರಾದ ಆಯ್ನಾಸ್ ಹಿನ್ನಲೆ ಕೆದಕಿ, ಅವರ ಸಂಪೂರ್ಣ ಮಾಹಿತಿಯನ್ನು ಹೊರತೆಗೆದಿದ್ದಾರೆ. ಅವರು ಏರ್ ಇಡಿಂಯಾದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿರುವುದು ತಿಳಿದ ಪೊಲೀಸರು, ಮುಖ್ಯವಾಗಿ ಅವಳ ಸಹೋದ್ಯೋಗಿಗಳ 15 ರಿಂದ 20 ಮೊಬೈಲ್ನಂಬರ್ಗಳಿಗೆ ಕರೆ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪ್ರವೀಣ್ ಮೊಬೈಲ್ ಹತ್ಯೆ ನಡೆದ ಸಮಯದ ಬಳಿಕ ಸ್ವೀಚ್ ಆಫ್ ಆಗಿದೆ. ಈ ಹಿನ್ನಲೆ ತಡಮಾಡದೆ ಒಬ್ಬ ಅಧಿಕಾರಿಯನ್ನು ಆ ಮೊಬೈಲ್ ನಂಬರ್ ಬೆನ್ನುಹತ್ತಲು ಹೇಳಿದ್ದಾರೆ. ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಆ ಮೊಬೈಲ್ ಯಾವಾಗ, ಎಲ್ಲಿ, ಮತ್ತೆ ಆನ್ ಆಗುತ್ತದೆಯೋ ಕಾಯುತ್ತಾ ಕುಳಿತಿದ್ದಾರೆ.
ಇದನ್ನೂ ಓದಿ:ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಎಸ್.ಪಿ ಬಿಚ್ಚಿಟ್ಟ ರೋಚಕ ಸಂಗತಿ?
ಮೊಬೈಲ್ ಮೂಲಕ ಸಿಕ್ಕಿಬಿದ್ದ ಹಂತಕ
ಈ ವೇಳೆ ಆರೋಪಿ ಪ್ರವೀಣ್ ಮೊಬೈಲ್ನ್ನು ಆನ್ ಮಾಡಿದ್ದಾನೆ. ಕೂಡಲೇ ಉಡುಪಿ ಪೊಲೀಸರು ತಡಮಾಡದೆ ಮೊಬೈಲ್ ಲೊಕೇಶನ್ ಸರ್ಚ್ ಮಾಡಿ, ಆತನ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ನಂತರ ಆತ ಬೆಳಗಾವಿಯ ಕುಡಚಿಯಲ್ಲಿರುವ ಅಕ್ಕನ ಮನೆಯಲ್ಲಿ ಅಡಗಿಕೊಂಡಿದ್ದಾನೆ ಎಂಬುದು ತಿಳಿದಿದೆ. ಅಲ್ಲಿಯ ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿ ಪ್ರವೀಣ್ ಚೌಗಲೆಯನ್ನು ಹಿಡಿದುಕೊಂಡು ಇಂದು ಬೆಳಗಿನ ಜಾವ ಉಡುಪಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಕೊನೆಗೂ ಪೊಲೀಸರಿಗೆ ತಲೆನೋವಾಗಿದ್ದ ಒಂದು ಸುಳಿವು ಕೊಡದ ಹಂತಕನನ್ನು ಹಿಡಿದುಕೊಂಡು ಬಂದು, ಇಂದು ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Wed, 15 November 23