Achar and Co: ‘ಎಲ್ರೂ ಚೆನ್ನಾಗಿದೆ ಅಂತಿದ್ದಾರೆ, ನಿಮ್ಮ ಮನೆಯವರಿಗೂ ಇಷ್ಟ ಆಗುತ್ತೆ’: ‘ಆಚಾರ್​ ಆ್ಯಂಡ್​ ಕೋ’ ನಿರ್ದೇಶಕಿ ಫುಲ್​ ಖುಷ್​

|

Updated on: Jul 27, 2023 | 5:35 PM

Sindhu Sreenivasa Murthy: ಬೆಂಗಳೂರಿನಲ್ಲಿ ‘ಆಚಾರ್​ ಆ್ಯಂಡ್​ ಕೋ’ ಪ್ರೀಮಿಯರ್​ ಶೋ ಆಯೋಜಿಸಲಾಗಿತ್ತು. ಸಿನಿಮಾ ವೀಕ್ಷಿಸಿದ ಬಳಿಕ ಜನರಿಂದ ಸಿಕ್ಕ ರೆಸ್ಪಾನ್ಸ್​ ನೋಡಿ ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ ಅವರು ಖುಷಿ ಆಗಿದ್ದಾರೆ.

ಜುಲೈ 28ರಂದು ‘ಆಚಾರ್​ ಆ್ಯಂಡ್​ ಕೋ’ (Achar and Co) ಸಿನಿಮಾ ಬಿಡುಗಡೆ ಆಗುತ್ತಿದೆ. ‘ಪಿಆರ್​ಕೆ ಪ್ರೊಡಕ್ಷನ್ಸ್​’ ಮೂಲಕ ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಬಿಡುಗಡೆಗೂ ಮುನ್ನ ಬೆಂಗಳೂರಿನಲ್ಲಿ ಪ್ರೀಮಿಯರ್​ ಶೋ ಆಯೋಜಿಸಲಾಗಿತ್ತು. ಸಿನಿಮಾ ವೀಕ್ಷಿಸಿದ ಬಳಿಕ ಜನರಿಂದ ಸಿಕ್ಕ ರೆಸ್ಪಾನ್ಸ್​ ನೋಡಿ ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ (Sindhu Sreenivasa Murthy) ಅವರು ಖುಷಿ ಆಗಿದ್ದಾರೆ. ‘ಇಲ್ಲಿ ಎಲ್ಲರೂ ಚೆನ್ನಾಗಿದೆ ಅಂತಿದ್ದಾರೆ. ನೀವು ಕೂಡ ಕುಟುಂಬ ಸಮೇತರಾಗಿ ಜುಲೈ 28ರಂದು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ನಿಮ್ಮ ಮನೆಯವರಿಗೂ ಇಷ್ಟ ಆಗುತ್ತದೆ’ ಎಂದು ಸಿಂಧೂ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.