Assembly Session: ಬಜೆಟ್ ಪ್ರತಿ ಹರಿದು ಸ್ಪೀಕರ್ ಮೇಲೆ ಎಸೆದ ಬಿಜೆಪಿ ಶಾಸಕರ ವರ್ತನೆ ಅಕ್ಷಮ್ಯ, ಖಂಡನೀಯ!

|

Updated on: Jul 19, 2023 | 4:55 PM

ಆಡಳಿತ ಪಕ್ಷದ ಸದಸ್ಯರಾದ ಕೃಷ್ಣ ಬೈರೇಗೌಡ, ಎನ್ ಚಲುವರಾಯಸ್ವಾಮಿ, ಡಿಕೆ ಶಿವಕುಮಾರ್ ಮೊದಲಾದವರೆಲ್ಲ ಬಿಜೆಪಿ ಶಾಸಕರ ವರ್ತನೆ ಸರಿಯಲ್ಲ ಅವರನ್ನು ಸಸ್ಪೆಂಡ್ ಮಾಡಿ ಅಂತ ಕೂಗಿ ಹೇಳುತ್ತಿದ್ದರು.

ಬೆಂಗಳೂರು: ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ರಾಷ್ಟ್ರೀಯ ವಿರೋಧ ಪಕ್ಷಗಳ ಆತಿಥ್ಯಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಬಳಸಿದ್ದು ವಿರೋಧಿಸಿದ ವಿರೋಧ ಪಕ್ಷದ ನಾಯಕರು ವಿಧಾನ ಸಭೆಯಲ್ಲಿ ವರ್ತಿಸಿಸ ರೀತಿ ಅಕ್ಷಮ್ಯವಾಗಿತ್ತು. ಅವರನ್ನು ರಾಜ್ಯದ ಅತಿಥಿಗಳೆಂದು (State guests) ಪರಿಗಣಿಸಲಾಗಿದ್ದರಿಂದ ಅಧಿಕಾರಗಳನ್ನು ಬಳಸಿದ್ದು ತಪ್ಪಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸದನದಲ್ಲಿ ಹೇಳಿದ ಬಳಿಕ ಬಿಜೆಪಿ ಸದಸ್ಯರರು ಸದನದ ಬಾವಿಗೆ ಇಳಿದು ಧಿಕ್ಕಾರಗಳನ್ನು ಕೂಗಲಾರಂಭಿಸಿದರು. ಅವರು ಧರಣಿ ಮಾತ್ರ ನಡೆಸಿದ್ದರೆ ತಪ್ಪೆನಿಸುತ್ತಿರುಲಿಲ್ಲ. ಆದರೆ ಬಜೆಟ್ ಪ್ರತಿಗಳನ್ನು ಹರಿದು ಆಗ ಸಭಾಧ್ಯಕ್ಷರ ಪೀಠದಲ್ಲಿ ಕುಳಿತ್ತಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ (deputy Speaker Rudrappa Lamani ) ಅವರ ಮೇಲೆ ಎಸೆದಿದ್ದು ಅತಿರೇಕದ ಪರಮಾವಧಿಯಾಗಿತ್ತು. ಪೀಠ ಮತ್ತು ಸಭಾಧ್ಯಕ್ಷರ ಘನತೆ ಗೌರವಗಳಿಗೆ ಚ್ಯುತಿ ಬರುವ ರೀತಿಯಲ್ಲಿ ಬಿಜೆಪಿ ಸದಸ್ಯರು ವರ್ತಿಸಿದರು. ಆಡಳಿತ ಪಕ್ಷದ ಸದಸ್ಯರಾದ ಕೃಷ್ಣ ಬೈರೇಗೌಡ, ಎನ್ ಚಲುವರಾಯಸ್ವಾಮಿ, ಡಿಕೆ ಶಿವಕುಮಾರ್ ಮೊದಲಾದವರೆಲ್ಲ ಬಿಜೆಪಿ ಶಾಸಕರ  ವರ್ತನೆ ಸರಿಯಲ್ಲ ಅವರನ್ನು ಸಸ್ಪೆಂಡ್ ಮಾಡಿ ಅಂತ ಕೂಗಿ ಹೇಳುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ