ಫೈಟ್ ಮಾಸ್ಟರ್ ರವಿವರ್ಮಾ ವಿರುದ್ಧ ಕೊಲೆ ಬೆದರಿಕೆ ದೂರು ನೀಡಿದ ಡ್ಯಾನಿ ಹೇಳಿದ್ದು ಹೀಗೆ

|

Updated on: Mar 14, 2024 | 4:58 PM

Ravi Varma vs Danny: ಫೈಟ್ ಮಾಸ್ಟರ್ ರವಿ ವರ್ಮಾ ವಿರುದ್ಧ ಕೊಲೆ ಬೆದರಿಕೆ ಪ್ರಕರಣವನ್ನು ಮತ್ತೊಬ್ಬ ಜನಪ್ರಿಯ ಫೈಟ್ ಮಾಸ್ಟರ್ ಡ್ಯಾನಿ ಮಾಡಿದ್ದಾರೆ. ಪ್ರಕರಣದ ಬಗ್ಗೆ ವಿವರವನ್ನೂ ನೀಡಿದ್ದಾರೆ.

ಕನ್ನಡದ ಇಬ್ಬರು ಜನಪ್ರಿಯ ಫೈಟ್ ಮಾಸ್ಟರ್​ಗಳಾದ ರವಿವರ್ಮಾ (RaviVarma) ಹಾಗೂ ಡಿಫರೆಂಟ್ ಡ್ಯಾನಿ ವಿರುದ್ಧ ಫೈಟ್ ನಡೆಯುತ್ತಿದೆ. ‘ಜಾಕಿ’ ಸಿನಿಮಾಕ್ಕಾಗಿ ನಾನು ಮಾಡಿರುವ ಫೈಟ್ ಕೊರಿಯೋಗ್ರಫಿಯನ್ನು ತನ್ನದು ಎಂದು ಹೇಳಿಕೊಂಡು ರವಿವರ್ಮಾ ಬಾಲಿವುಡ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂದು ಡ್ಯಾನಿ ಆರೋಪ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ರವಿವರ್ಮಾ, ಡ್ಯಾನಿಯ ಸಹಾಯಕನಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಫೈಟ್ ಮಾಸ್ಟರ್ ಡ್ಯಾನಿ ಇಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ರವಿವರ್ಮಾ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಡ್ಯಾನಿ, ಪ್ರಕರಣದ ಬಗ್ಗೆ ವಿವರ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 14, 2024 04:57 PM