ಚಿಕ್ಕಮಗಳೂರಿನಲ್ಲಿ ವರ್ಷದ ಮೊದಲ ಭರ್ಜರಿ ಮಳೆ; ಇಲ್ಲಿದೆ ವಿಡಿಯೋ

ಚಿಕ್ಕಮಗಳೂರಿನಲ್ಲಿ ವರ್ಷದ ಮೊದಲ ಭರ್ಜರಿ ಮಳೆ; ಇಲ್ಲಿದೆ ವಿಡಿಯೋ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 14, 2024 | 3:56 PM

ಚಿಕ್ಕಮಗಳೂರಿಗೆ ವರುಣದೇವ ತಂಪೆರೆದಿದ್ದಾನೆ. ಈ ಮೂಲಕ ವರ್ಷದ ಮೊದಲ ಭರ್ಜರಿ ಮಳೆ ಆರಂಭವಾಗಿದೆ. ಚಿಕ್ಕಮಗಳೂರು(Chikkamagaluru) ತಾಲೂಕಿನ ಕೊಳಗಾವೆ ಗ್ರಾಮದಲ್ಲಿ ಭಾರೀ ಮಳೆ ಬಿದ್ದಿದ್ದು, ಸತತ ಒಂದು ಗಂಟೆಗಳ ಕಾಲ ಭಾರಿ ಪ್ರಮಾಣದ ಮಳೆ ಸುರಿದಿದೆ. ಕೊಳಗಾಮೆ, ಮೇಲಿನಹುಲುವತ್ತಿ ಭಾಗಗಳಲ್ಲಿ ಸುರಿದ ಮಳೆ ಕಂಡು ಹಳ್ಳಿಗರು, ಬೆಳೆಗಾರರು ಸಂತಸಕ್ಕೀಡಾಗಿದ್ದಾರೆ.

ಚಿಕ್ಕಮಗಳೂರು, ಮಾ.14: ಬಿಸಿಲ ಬೇಗೆಯಿಂದ ನಲುಗಿದ್ದ ಚಿಕ್ಕಮಗಳೂರಿಗೆ ವರುಣದೇವ ತಂಪೆರೆದಿದ್ದಾನೆ. ಈ ಮೂಲಕ ವರ್ಷದ ಮೊದಲ ಭರ್ಜರಿ ಮಳೆ ಆರಂಭವಾಗಿದೆ. ಚಿಕ್ಕಮಗಳೂರು(Chikkamagaluru) ತಾಲೂಕಿನ ಕೊಳಗಾವೆ ಗ್ರಾಮದಲ್ಲಿ ಭಾರೀ ಮಳೆ ಬಿದ್ದಿದ್ದು, ಸತತ ಒಂದು ಗಂಟೆಗಳ ಕಾಲ ಭಾರಿ ಪ್ರಮಾಣದ ಮಳೆ ಸುರಿದಿದೆ. ಕೊಳಗಾಮೆ, ಮೇಲಿನಹುಲುವತ್ತಿ ಭಾಗಗಳಲ್ಲಿ ಸುರಿದ ಮಳೆ ಕಂಡು ಹಳ್ಳಿಗರು, ಬೆಳೆಗಾರರು ಸಂತಸಕ್ಕೀಡಾಗಿದ್ದಾರೆ. ಹಲವು ಹಳ್ಳಿಗಳಲ್ಲಿ 20-30-40 ಸೆನ್ಸ್​ನಷ್ಟು ಮಳೆಯಾಗಿದೆ. ಅಡಿಕೆ-ಕಾಫಿ-ಮೆಣಸು ಉಳಿಕೊಳ್ಳಲು ಪರದಾಡ್ತಿದ್ದ ಬೆಳೆಗಾರರಿಗೆ ಮಳೆ ನೋಡುತ್ತಿದ್ದಂತೆ ಸಂತಸವಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ