ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ನೃತ್ಯ ಮಾಡದಕ್ಕೆ ಅನಂತ್ ನಾಗ್ ನೀಡಿದ ಕಾರಣ ಹೀಗಿದೆ

Updated on: Oct 03, 2026 | 8:00 PM

ಅನಂತ್ ನಾಗ್ ಅವರ ಆರಂಭಿಕ ಸಿನಿ ಪಯಣ, ಸಂಕಲ್ಪದಿಂದ ಹಿಡಿದು ಮುಂಬೈನಲ್ಲಿನ ಹಿಂದಿ ನಾಟಕಗಳ ಮೂಲಕ ಅಂಕುರ್ ಚಿತ್ರಕ್ಕೆ ಕಾಲಿಟ್ಟ ಕಥೆ ರೋಚಕವಾಗಿದೆ. ನಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ತಮ್ಮ ವಿಭಿನ್ನ ನೃತ್ಯ ನಿಲುವು ಮತ್ತು ನಾಟಕ ಹಿನ್ನೆಲೆಯಿಂದಾಗಿ ಕೇವಲ ನಟನೆಯ ಮೂಲಕವೇ ಪ್ರೇಕ್ಷಕರ ಮನ ಗೆದ್ದವರು.

ಬೆಂಗಳೂರು, ಅಕ್ಟೋಬರ್​ 03: ಹಿರಿಯ ನಟ ಅನಂತ್ ನಾಗ್ ಅವರು ತಮ್ಮ ನಟನೆಯಿಂದಲೇ ಕನ್ನಡ ಸಿನಿ ರಸಿಕರ ಮನ ಗೆದ್ದವರು. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ಅವರು ನಟಿಸುತ್ತಾರೆ. ಇದಕ್ಕೆ ಸಾಕಷ್ಟು ಚಿತ್ರಗಳೇ ಸಾಕ್ಷಿ. ಡ್ಯಾನ್ಸ್​ ವಿಚಾರಕ್ಕೆ ಬಂದರೆ ಅಷ್ಟಕಷ್ಟೇ. ಡ್ಯಾನ್ಸ್ ಮಾಡುವುದು ಅನಂತ್​ ನಾಗ್​ ಅವರಿಗೆ ಸುತರಾಂ ಇಷ್ಟವಿರಲಿಲ್ಲ ಎಂದು ಟಿವಿ9 ಕನ್ನಡ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಗಂಡುಕಲೆಯಾದ ಯಕ್ಷಗಾನವನ್ನು ಬಾಲ್ಯದಿಂದಲೂ ನೋಡಿ ಬೆಳೆದಿದ್ದರಿಂದ ಸಿನಿಮಾಗಳಲ್ಲಿ ಗಂಡಸರು ಮಾಡುವ ಡ್ಯಾನ್ಸ್ ತಮ್ಮ ಮನಸ್ಸಿಗೆ ಒಪ್ಪುತ್ತಿರಲಿಲ್ಲವೆಂದು ಅವರು ಹೇಳಿದ್ದಾರೆ. ತಮಗೆ ನೃತ್ಯದ ಬದಲಾಗಿ ನಟನೆಗೆ ಹೆಚ್ಚು ಒತ್ತು ನೀಡಿದ್ದರಿಂದ ಕನ್ನಡ ಚಿತ್ರರಂಗದಲ್ಲಿ ಉತ್ತಮ ಮನ್ನಣೆ ಸಿಕ್ಕಿತು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Oct 03, 2026 07:58 PM
Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More