Jayamala meets CM Siddaramaiah: ನಿನ್ನೆ ಉಮಾಶ್ರೀ ಇಂದು ಜಯಮಾಲಾ, ಮುಖ್ಯಮಂತ್ರಿಗಳ ನಿವಾಸಕ್ಕೆ ನಟಿ-ಮಾಜಿ ಸಚಿವೆಯರ ದೌಡು!

Jayamala meets CM Siddaramaiah: ನಿನ್ನೆ ಉಮಾಶ್ರೀ ಇಂದು ಜಯಮಾಲಾ, ಮುಖ್ಯಮಂತ್ರಿಗಳ ನಿವಾಸಕ್ಕೆ ನಟಿ-ಮಾಜಿ ಸಚಿವೆಯರ ದೌಡು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 10, 2023 | 11:57 AM

ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಜಯಮಾಲಾ ಇಂದು ಸಿದ್ದರಾಮಯ್ಯರನ್ನು ಭೇಟಿಯಾದರು.

ಬೆಂಗಳೂರು: ಸಿನಿಮಾ ತಾರೆಯರಾಗಿ ಮೆರೆದು ನಂತರ ಪಾಲಿಟಿಕ್ಸ್ ಬಂದು ಈ ಕ್ಷೇತ್ರದಲ್ಲೂ ಮಿಂಚಿದ ನಟಿ-ರಾಜಕಾರಣಿಗಳು ಒಬ್ಬೊಬ್ಬರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಭೇಟಿಯಾಗುತ್ತಿದ್ದಾರೆ. ನಿನ್ನೆ ಮಾಜಿ ಸಚಿವೆ ಉಮಾಶ್ರೀ (Umashree) ಮುಖ್ಯಮಂತ್ರಿಗಳ ನಿವಾಸಕ್ಕೆ ಬಂದು ಹೋಗಿದನ್ನು ವರದಿ ಮಾಡಿದ್ದೇವೆ. ಇವತ್ತು ಬೆಳಗ್ಗೆ 70 ಮತ್ತು 80ರ ದಶಕದ ಜನಪ್ರಿಯ ತಾರೆ ಮತ್ತು ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಜಯಮಾಲಾ (Jayamala) ಸಿದ್ದರಾಮಯ್ಯರ ನಿವಾಸಕ್ಕೆ ಆಗಮಿಸುತ್ತಿರುವುದನ್ನು ಇಲ್ಲಿ ನೋಡಬಹುದು. ಗಣ್ಯರ ನಡುವೆ ನಡೆದ ಮಾತುಕತೆಯ ವಿವರ ಗೊತ್ತಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ