Darshan Thoogudeepa: ಮಂಡ್ಯದ ಜನರ ಬಳಿ ನಟ ದರ್ಶನ್ ಕ್ಷಮೆ; ಮಾಡಿದ ತಪ್ಪೇನು?

|

Updated on: Apr 18, 2024 | 2:28 PM

ಯಶ್ ಅವರು ಸದ್ಯ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡದೆ ವ್ಯಕ್ತಿಯ ಪರ ನಿಂತಿದ್ದಾರೆ. ಮಂಡ್ಯದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ವೋಟ್ ಕೇಳಿದ್ದಾರೆ. ಈ ವೇಳೆ ಮಂಡ್ಯ ಜನತೆ ಬಳಿ ಕ್ಷಮೆಯಾಚಿಸಿದ್ದಾರೆ.

ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರು ಮಂಡ್ಯಕ್ಕೆ ತೆರಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಅವರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ‘ನಾನು ಪಕ್ಷದ ಪರ ಅಲ್ಲ, ವ್ಯಕ್ತಿಯ ಪರ’ ಎಂದು ಪುನರುಚ್ಛರಿಸಿದ್ದಾರೆ. ಈ ಮಧ್ಯೆ ದರ್ಶನ್ ಅವರು ಮಂಡ್ಯದ ಜನತೆಯ ಬಳಿ ಕ್ಷಮೆ ಕೇಳಿದ್ದಾರೆ. ‘ಮೊದಲನೆಯದಾಗಿ ನಾನು ಎಲ್ಲಾ ತಾಯಂದಿರಗೂ ಕ್ಷಮೆ ಕೇಳುತ್ತೇನೆ. ತಾಯಂದಿರು ನಮಸ್ಕಾರ ಮಾಡುತ್ತಿದ್ದಾರೆ. ತಿರುಗಿ ನಮಸ್ಕಾರ ಮಾಡೋಣ ಎಂದರೆ ಎಡಗೈ ಬರುತ್ತಿಲ್ಲ. ಒಂದೇ ಕೈಯಲ್ಲಿ ನಮಸ್ಕಾರ ಮಾಡಿದರೆ ಬೇಸರ ಮಾಡಿಕೊಳ್ಳಬೇಡಿ’ ಎಂದಿದ್ದಾರೆ ದರ್ಶನ್. ಜೊತೆಗೆ ಅವರು ಸ್ಟಾರ್ ಚಂದ್ರುಗೆ ವೋಟ್ ಮಾಡುವಂತೆ ಅವರು ಕೋರಿದ್ದಾರೆ. ‘ಡೆವಿಲ್’ ಸಿನಿಮಾ ಶೂಟಿಂಗ್ ವೇಳೆ ದರ್ಶನ್​ ಕೈಗೆ ಪೆಟ್ಟಾಗಿತ್ತು. ಈ ಕಾರಣಕ್ಕೆ ಅವರು ಆಪರೇಷನ್​ಗೆ ಒಳಗಾದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ