ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ

|

Updated on: Dec 18, 2024 | 11:32 AM

ನಟ ದರ್ಶನ್ ಅವರಿಗೆ ತೀವ್ರ ಬೆನ್ನು ನೋವು ಕಾಡಿದೆ. ಇದರಿಂದ ಹೊರ ಬರಲು ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯ ಇದೆ ಎಂದು ಹೇಳಲಾಗಿತ್ತು. ಆದರೆ, ಈಗ ಅವರು ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾದರು. ಅವರು ಬೆನ್ನು ನೋವಿನ ಕಾರಣ ನೀಡಿ ಆಸ್ಪತ್ರೆಯಿಂದ ಅವರು ಮಧ್ಯಂತರ ಜಾಮೀನು ಪಡೆದರು. ಈಗ ಆಸ್ಪತ್ರೆಯಿಂದ ಅವರು ಹೊರ ಬಂದಿದ್ದಾರೆ. ಜಾಮೀನು ಪಡೆಯುತ್ತಿದ್ದಂತೆ ಸರ್ಜರಿ ಇಲ್ಲದೆ ಬಂದಿದ್ದಾರೆ. ಹಾಗಂತ ದರ್ಶನ್​ಗೆ ಬೆನ್ನು ನೋವು ಕಡಿಮೆ ಆಗಿಲ್ಲ. ಅವರು ಕುಂಟುತ್ತಲೇ ಸಾಗಿದ್ದಾರೆ. ಮಗನ ಆಸರೆ ಪಡೆದು ಕಾರು ಏರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.