ಧನ್ವೀರ್, ದರ್ಶನ್, ವಿಜಯಲಕ್ಷ್ಮಿ ಹಣಕಾಸಿನ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು

Edited By:

Updated on: Oct 25, 2026 | 12:02 PM

ದರ್ಶನ್, ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಹಣಕಾಸಿನ ವಿಚಾರಕ್ಕೆ ಕಿರಿಕ್ ಆಗಿದೆ. ಅದರ ಸಂಧಾನಕ್ಕಾಗಿ ಆಪ್ತರಾದ ವೇಲು ಬಳಿ ಮಾತುಕಥೆ ಮಾಡಲಾಗಿತ್ತು. ಆಗ ಏನೆಲ್ಲ ನಡೆಯಿತು ಎಂಬುದನ್ನು ವೇಲು ಅವರು ವಿವರಿಸಿದ್ದಾರೆ. ‘ದರ್ಶನ್ ಹೇಳಿದರೆ ಎಲ್ಲ ದುಡ್ಡು ಸೆಟಲ್ ಮಾಡುತ್ತೇನೆ’ ಎಂದು ಧನ್ವೀರ್ ಹೇಳಿದ್ದರು.

ದರ್ಶನ್, ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಹಣಕಾಸಿನ ವಿಚಾರಕ್ಕೆ ಕಿರಿಕ್ ಆಗಿದೆ. ಅದರ ಸಂಧಾನಕ್ಕಾಗಿ ಆಪ್ತರಾದ ವೇಲು ಬಳಿ ಮಾತುಕಥೆ ಮಾಡಲಾಗಿತ್ತು. ಆಗ ಏನೆಲ್ಲ ನಡೆಯಿತು ಎಂಬುದನ್ನು ವೇಲು ಅವರು ವಿವರಿಸಿದ್ದಾರೆ. ‘ದರ್ಶನ್ ಹೇಳಿದರೆ ಎಲ್ಲ ದುಡ್ಡು ಸೆಟಲ್ ಮಾಡುತ್ತೇನೆ’ ಎಂದು ಧನ್ವೀರ್ ಹೇಳಿದ್ದರು. ಆದರೆ ಮುಂದೆ ಏನಾಯಿತು ಎಂಬುದರ ಬಗ್ಗೆ ವೇಲು ಮಾಹಿತಿ ನೀಡಿದ್ದಾರೆ. ‘ನಾನು, ಧನ್ವೀರ್ ಹಾಗೂ ವಿಜಯಲಕ್ಷ್ಮಿ ಅವರು ಒಟ್ಟಿಗೆ ಹೋಗಿ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದೆವು. ಹಣ ತಲುಪಿಸುವಂತೆ ಧನ್ವೀರ್​ಗೆ ದರ್ಶನ್ ಹೇಳಿದರು. ನಾಳೆಯೇ ತಲುಪಿಸುವುದಾಗಿ ಧನ್ವೀರ್ ಒಪ್ಪಿಕೊಂಡಿದ್ದರು. ಆದರೆ ಬಳಿಕ ಧನ್ವೀರ್ ನನಗೆ ಫೋನ್ ಮಾಡಿದಾಗ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಅವರಿಗೆ ಮತ್ತು ಅವರ ತಂದೆಗೆ ಬುದ್ಧಿ ಹೇಳಿದೆ. ನೀವು ಮಧ್ಯ ಬರಬೇಡಿ ಎಂದು ಅವರು ನನಗೆ ಹೇಳಿದರು’ ಎಂದಿದ್ದಾರೆ ವೇಲು. ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More