ಟಿವಿ9 ಎಕ್ಸ್ಪೋ ಬಗ್ಗೆ ನಟ ಧರ್ಮಣ್ಣ ಮೆಚ್ಚುಗೆಯ ಮಾತುಗಳು
Tv9 Expo: ಟಿವಿ9 ರಿಯಲ್ ಎಸ್ಟೇಟ್ ಮತ್ತು ಫರ್ನೀಚರ್ ಎಕ್ಸ್ಪೋನಲ್ಲಿ ಭಾಗವಹಿಸಿದ್ದ ನಟ ಧರ್ಮಣ್ಣ, ಎಕ್ಸ್ಪೋ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಟಿವಿ9 ಎಕ್ಸ್ಪೋ ಹೇಗೆ ಸಾಮಾನ್ಯ ಜನರಿಗೆ ಸಹಾಯಕವಾಗುತ್ತಿದೆ ಎಂಬುದನ್ನು ವಿವರಿಸಿದರು.
ಟಿವಿ9 ರಿಯಲ್ ಎಸ್ಟೇಟ್ ಮತ್ತು ಫರ್ನೀಚರ್ ಎಕ್ಸ್ಪೋನಲ್ಲಿ ಸೆಪ್ಟೆಂಬರ್ 10ರಂದು ಭಾಗವಹಿಸಿದ್ದ ನಟ ಧರ್ಮಣ್ಣ ಎಕ್ಸ್ಪೋ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಎಕ್ಸ್ಪೋನಲ್ಲಿ ಬೈಕ್ ಗೆದ್ದ ಯುವಕನಿಗೆ ಬೈಕ್ ಹಸ್ತಾಂತರವನ್ನೂ ಸಹ ಧರ್ಮಣ್ಣ (Dharmanna) ಎಕ್ಸ್ಪೋನಲ್ಲಿ ಮಾಡಿ ಖುಷಿ ಪಟ್ಟರು. ಬೆಂಗಳೂರಿನಂಥಹಾ ಮಹಾನಗರಗಳಲ್ಲಿ ಸೈಟ್ ಖರೀದಿ ಬಹಳ ಕಷ್ಟ, ಮೋಸ ಮಾಡುವವರ ಸಂಖ್ಯೆ ಹೆಚ್ಚು, ಆದರೆ ಸೈಟ್ ಖರೀದಿ ಹೇಗೆ ಮಾಡಬೇಕು, ಸುಲಭವಾಗಿ ಸೈಟ್ ಖರೀದಿ ಹೇಗೆ, ಕೇವಲ ಐದು ಲಕ್ಷದಿಂದಲೂ ಸೈಟ್ ಖರೀದಿ ಸಾಧ್ಯ ಎಂಬುದನ್ನೆಲ್ಲ ಇಲ್ಲಿ ನಾನು ತಿಳಿದುಕೊಂಡೆ ಗ್ರಾಹಕರಿಗೆ ಬಹಳ ಉಪಯುಕ್ತವಾದ ಮಾಹಿತಿಯನ್ನು ಈ ಎಕ್ಸ್ಪೋ ನೀಡುತ್ತಿದೆ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ