Jaggesh: ನನ್ನಿಂದಲೇ ಕೋಮಲ್ ಇಷ್ಟು ವರ್ಷ ಸಿನಿಮಾ ಮಾಡಲಿಲ್ಲ ಎಂದ ಜಗ್ಗೇಶ್

Updated on: Apr 08, 2023 | 10:12 PM

ನಟ ಜಗ್ಗೇಶ್ ಸಹೋದರ ಕೋಮಲ್ ಬಗ್ಗೆ ಮಾತನಾಡುತ್ತಾ ನನ್ನಿಂದಲೇ ಆತ ಎಂಟು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿಯುವಂತಾಯಿತು ಎಂದಿದ್ದಾರೆ.

ನಟ ಜಗ್ಗೇಶ್​ಗೆ (Jaggesh) ಸಹೋದರ ಕೋಮಲ್ (Komal)​ ಬಗ್ಗೆ ವಿಶೇಷ ಪ್ರೀತಿ. ಇದೀಗ ಕೋಮಲ್ ಎಂಟು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಉಂಡೆನಾಮ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜಗ್ಗೇಶ್, ನನ್ನಿಂದಲೇ ಕೋಮಲ್​ ಇಷ್ಟು ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಉಳಿದ. ಬಹಳಷ್ಟು ಕಷ್ಟಪಟ್ಟು ಇಷ್ಟು ವರ್ಷಗಳನ್ನು ಕಳೆದಿದ್ದಾನೆ. ಒಳ್ಳೆಯ ವ್ಯವಹಾರ ಮಾಡಿದ್ದಾನೆ ಎಂದಿದ್ದಾರೆ. ತಮ್ಮಿಂದ ಯಾಕೆ ಕೋಮಲ್ ಸಿನಿಮಾ ರಂಗದಿಂದ ದೂರ ಉಳಿದರು ಎಂಬ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More