AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರಮಂದಿರಗಳಲ್ಲಿ 'ಕರಾವಳಿ' ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಬಿ ಶೆಟ್ಟಿ ಖುಷ್

ಚಿತ್ರಮಂದಿರಗಳಲ್ಲಿ ‘ಕರಾವಳಿ’ ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಬಿ ಶೆಟ್ಟಿ ಖುಷ್

ರಾಜೇಶ್ ದುಗ್ಗುಮನೆ
|

Updated on: Jul 27, 2026 | 12:23 PM

Share

ಮುಖ್ಯಾಂಶಗಳು

  • ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ
  • 'ಕರಾವಳಿ' ಮಣ್ಣಿನ ಸೊಗಡಿಗೆ ಕನ್ನಡಿಗರು ಫಿದಾ
  • ರಾಜ್ ಬಿ ಶೆಟ್ಟಿ ಅದ್ಧೂರಿ ಸಂಭ್ರಮಾಚರಣೆ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ 'ಕರಾವಳಿ' ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರಾವಳಿ ಭಾಗದ ಕಂಬಳ ಹಾಗೂ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯ ಈ ಕಥೆಗೆ ಸಿನಿಪ್ರೇಮಿಗಳು ಫಿದಾ ಆಗಿದ್ದಾರೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪಾಸಿಟಿವ್ ವಿಮರ್ಶೆಗಳನ್ನು ಪಡೆದುಕೊಂಡಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ.

‘ಕರಾವಳಿ’ ಸಿನಿಮಾ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ನಟ ರಾಜ್ ಬಿ. ಶೆಟ್ಟಿ ಅವರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರ ಸಂಭ್ರಮವನ್ನು ಕಣ್ಣಾರೆ ಕಂಡಿರುವ ಅವರು, ಸಿನಿಮಾವನ್ನು ಇಷ್ಟಪಟ್ಟು ಬೆಂಬಲಿಸುತ್ತಿರುವ ಕನ್ನಡಿಗರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಿವಾದಗಳನ್ನೆಲ್ಲ ಬದಿಗೊತ್ತಿ ಚಿತ್ರವನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸುತ್ತಿರುವುದು ಇಡೀ ಚಿತ್ರತಂಡದ ಸಂತಸವನ್ನು ಇಮ್ಮಡಿಗೊಳಿಸಿದೆ.

ಕರಾವಳಿ’ ಸಿನಿಮಾ ಗಳಿಕೆ ಕೇವಲ ಮೂರೇ ದಿನಗಳಲ್ಲಿ ನಾಲ್ಕು ಕೋಟಿ ರೂಪಾಯಿಯ ಸಮೀಪಕ್ಕೆ ಬಂದು ತಲುಪಿದೆ. ವೀಕೆಂಡ್‌ನ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡಿರುವ ಚಿತ್ರದ ಒಟ್ಟು ಇಂಡಿಯಾ ಗ್ರಾಸ್ ಕಲೆಕ್ಷನ್ ಬರೋಬ್ಬರಿ 3.88 ಕೋಟಿ ರೂಪಾಯಿ ದಾಟಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ ಹಾಗೂ ರಮೇಶ್ ಇಂದಿರ ಅವರ ಅದ್ಭುತ ನಟನೆಗೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದು, ಮುಂಬರುವ ದಿನಗಳಲ್ಲಿ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us