ಪ್ರಥಮ್ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
Rakshan vs Pratham: ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆಗೆ ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಹಲ್ಲೆಗೆ ಯತ್ನಿಸಿದವರ ಜೊತೆಗೆ ರಕ್ಷಕ್ ಪಾರ್ಟಿ ಮಾಡುತ್ತಾ ಅಲ್ಲೇ ಇದ್ದರಂತೆ. ಆದರೆ ರಕ್ಷಕ್, ಪ್ರಥಮ್ ಸಹಾಯಕ್ಕೆ ಧಾವಿಸಿಲ್ಲ. ಎಲ್ಲವನ್ನೂ ನೋಡುತ್ತಾ ಅಲ್ಲೇ ಕೂತಿದ್ದರಂತೆ. ಈ ಬಗ್ಗೆ ರಕ್ಷಕ್ ಮಾತನಾಡಿದ್ದಾರೆ.
ಪ್ರಥಮ್ ಮೇಲೆ ದರ್ಶನ್ (Darshan) ಅಭಿಮಾನಿಗಳು ಹಲ್ಲೆಗೆ ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿದೆ. ದರ್ಶನ್ ಅಭಿಮಾನಿಯೊಬ್ಬ ದೊಡ್ಡ ಡ್ರ್ಯಾಗರ್ ತೋರಿಸಿ ಚುಚ್ಚುವುದಾಗಿ ಹೇಳಿದನಂತೆ. ಆ ವ್ಯಕ್ತಿಯೊಟ್ಟಿಗೆ ನಟ ರಕ್ಷಕ್ ಗಂಟೆಗಳಿಂದ ಪಾರ್ಟಿ ಮಾಡುತ್ತಿದ್ದರಂತೆ. ತಮ್ಮ ಹಿರಿಯ ನಟನಿಗೆ ಹೀಗೆ ಬೆದರಿಕೆ ಹಾಕುತ್ತಿದ್ದರೂ ರಕ್ಷಕ್ ಏನೊಂದೂ ಮಾತನಾಡದೆ ಅಲ್ಲಿ ಕುಳಿತಿದ್ದರಂತೆ. ಹೀಗೆಂದು ಪ್ರಥಮ್ ಆರೋಪ ಮಾಡಿದ್ದಾರೆ. ಅಂದು ನಡೆದಿದ್ದೇನು? ತಾವೇಕೆ ಮಾತನಾಡಲಿಲ್ಲ ಇತರೆ ವಿಷಯಗಳ ಬಗ್ಗೆ ರಕ್ಷಕ್ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
