ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಶನಿವಾರ ದಸರಾದ ವೇಳೆ ರಾಮಲೀಲಾ ಸಂದರ್ಭದಲ್ಲಿ ವೇದಿಕೆಯ ಮೇಲೆ ರಾಮ್ ಮತ್ತು ರಾವಣನ ಪಾತ್ರ ಮಾಡುತ್ತಿದ್ದ ನಟರ ನಡುವೆ ನಿಜವಾದ ಜಗಳ ಪ್ರಾರಂಭವಾಯಿತು. ಅಲ್ಲಿ ಸೇರಿದ್ದ ಪ್ರೇಕ್ಷಕರು ಜಗಳ ಬಿಡಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.
ಅಮ್ರೋಹಾ: ನವರಾತ್ರಿಯಂದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ರಾಮಲೀಲಾ ಪ್ರದರ್ಶನದ ಸಂದರ್ಭದಲ್ಲಿ ಶ್ರೀರಾಮ ಮತ್ತು ರಾವಣನನ್ನು ಚಿತ್ರಿಸುವ ನಟರ ನಡುವೆ ನಿಜ ಜೀವನದಲ್ಲಿಯೂ ವಾಗ್ವಾದ ಸಂಭವಿಸಿದೆ. ಈ ವಿಡಿಯೋದಲ್ಲಿ ನಟರು ಬಾಣಗಳನ್ನು ಹೊಡೆಯುವ ಮೂಲಕ ಆರಂಭದಲ್ಲಿ ಸ್ಕ್ರಿಪ್ಟ್ ಅನ್ನು ಅನುಸರಿಸುವುದನ್ನು ತೋರಿಸುತ್ತದೆ. ನಂತರ ಇದು ವೈಯಕ್ತಿಕಕ್ಕೆ ತಿರುಗಿ ಹೊಡೆದಾಟಕ್ಕೆ ತಿರುಗಿದೆ. ಅವರು ಪರಸ್ಪರ ಕೂದಲನ್ನು ಎಳೆಯುತ್ತಾ ಹೊಡೆದಾಡಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Oct 14, 2024 09:55 PM