ಆ ಸಿನಿಮಾ ನೋಡಿ ಪುಟ್ಟಿ ನನ್ನ ಅಳಿಸಿಬಿಟ್ಯಲ್ಲೆ ಎಂದು ರಾಜ್​ಕುಮಾರ್ ಹೇಳಿದ್ದರು; ಹಳೆ ಘಟನೆ ನೆನೆದ ಅನು ಪ್ರಭಾಕರ್

| Updated By: ರಾಜೇಶ್ ದುಗ್ಗುಮನೆ

Updated on: May 19, 2022 | 2:29 PM

1999ರಲ್ಲಿ ತೆರೆಗೆ ಬಂದ ‘ಹೃದಯ ಹೃದಯ’ ಸಿನಿಮಾವನ್ನು ಡಾ.ರಾಜ್​ಕುಮಾರ್ ವೀಕ್ಷಣೆ ಮಾಡಿದ್ದರು. ಸಿನಿಮಾ ನೋಡಿ ಅವರು ಭಾವುಕರಾಗಿದ್ದರು. ಈ ಬಗ್ಗೆ ಅನು ಪ್ರಭಾಕರ್ ಮಾತನಾಡಿದ್ದಾರೆ.

1999ರಲ್ಲಿ ತೆರೆಗೆ ಬಂದ ‘ಹೃದಯ ಹೃದಯ’ ಸಿನಿಮಾದಲ್ಲಿ (Hrudaya Hrudaya Movie) ಶಿವರಾಜ್​ಕುಮಾರ್, ರಮೇಶ್ ಅರವಿಂದ್, ಅನು ಪ್ರಭಾಕರ್ ನಟಿಸಿದ್ದರು. ಇದು ಲೀಡ್​ ರೋಲ್​ನಲ್ಲಿ ಅನು ಪ್ರಭಾಕರ್​ ಅವರ ಮೊದಲ ಸಿನಿಮಾ. ಈ ಸಿನಿಮಾವನ್ನು ಡಾ.ರಾಜ್​ಕುಮಾರ್ ವೀಕ್ಷಣೆ ಮಾಡಿದ್ದರು. ಸಿನಿಮಾ ನೋಡಿ ಅವರು ಭಾವುಕರಾಗಿದ್ದರು. ಈ ಬಗ್ಗೆ ಅನು ಪ್ರಭಾಕರ್ (Anu Prabhakar) ಮಾತನಾಡಿದ್ದಾರೆ. ಅವರ ಅಭಿನಯದ ‘ಸಾರಾ ವಜ್ರ’ ( Sara Vajra Movie) ಬಿಡುಗಡೆಗೆ ಸಜ್ಜಾಗಿದೆ. ಮೇ 20ರಂದು ಈ ಸಿನಿಮಾ ತೆರೆಕಾಣುತ್ತಿದೆ. ಸಾರಾ ಅಬೂಬಕ್ಕರ್​ ಅವರು ಬರೆದ ಕಾದಂಬರಿ ಆಧರಿಸಿ ಈ ಸಿನಿಮಾ ತಯಾರಾಗಿದೆ. ನಿರ್ದೇಶಕಿ ಶ್ವೇತಾ ಶೆಟ್ಟಿ (ಆರ್ನಾ ಸಾಧ್ಯ) ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾ ಕುರಿತು ಟಿವಿ9 ಕನ್ನಡದ ಜತೆ ಮಾತನಾಡುವಾಗ  ‘ಹೃದಯ ಹೃದಯ’ ಸಿನಿಮಾ ಬಗ್ಗೆ ಅನು ಪ್ರಭಾಕರ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.