ಖುಷ್ಬೂನ ತುಂಬಾನೇ ಕಾಡಿಸಿದ್ರು ಕನ್ನಡದ ಈ ಬಾಲ ನಟ
ಮಾಸ್ಟರ್ ಮಂಜುನಾಥ್ ‘ರಣಧೀರ’ ಸಿನಿಮಾದಲ್ಲಿ ನಟಿಸುವಾಗ ಅವರಿಗೆ 11 ವರ್ಷ ವಯಸ್ಸು. ಖುಷ್ಬೂಗೆ 18 ವರ್ಷ ವಯಸ್ಸು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅವರಿಗೆ ಮಾಸ್ಟರ್ ಮಂಜುನಾಥ್ ತುಂಬಾನೇ ಕಾಟ ಕೊಟ್ಟಿದ್ದರಂತೆ.
ನಟಿ ಖುಷ್ಬೂ ಅವರು (Kushboo) ಕನ್ನಡದ ‘ರಣಧೀರ’ ಸಿನಿಮಾದಲ್ಲಿ ನಟಿಸಿದ್ದರು. ರವಿಚಂದ್ರನ್ಗೆ ಜತೆಯಾಗಿ ಅವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ತುಂಬಾನೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಮಾಸ್ಟರ್ ಮಂಜುನಾಥ್ (Master Manjunath) ಕೂಡ ನಟಿಸಿದ್ದರು. ಅವರು ಈ ಸಿನಿಮಾದಲ್ಲಿ ನಟಿಸುವಾಗ ಅವರಿಗೆ 11 ವರ್ಷ ವಯಸ್ಸು. ಖುಷ್ಬೂಗೆ 18 ವರ್ಷ ವಯಸ್ಸು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅವರಿಗೆ ಮಾಸ್ಟರ್ ಮಂಜುನಾಥ್ ತುಂಬಾನೇ ಕಾಟ ಕೊಟ್ಟಿದ್ದರಂತೆ. ಈ ಬಗ್ಗೆ ಮಾಸ್ಟರ್ ಮಂಜುನಾಥ್ ಮಾತನಾಡಿದ್ದಾರೆ. ‘ನನ್ನ ಜತೆ ನಟಿಸುತ್ತಿರುವ ಎಲ್ಲರೂ ನನಗಿಂತ 8-10 ವರ್ಷ ದೊಡ್ಡವರಾಗಿದ್ದರು. ನಾನು ತುಂಬಾ ತೊಂದರೆ ಕೊಟ್ಟಿದ್ದು ಖುಷ್ಬೂ ಅವರಿಗೆ. ಹೇಗೆ ತೊಂದರೆ ಕೊಡಬೇಕು ಅಂತ ರವಿಚಂದ್ರನ್ ಅವರು ಹೇಳಿಕೊಡ್ತಿದ್ರು’ ಎಂದು ಮಾಹಿತಿ ನೀಡಿದ್ದಾರೆ ಮಾಸ್ಟರ್ ಮಂಜುನಾಥ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
