ಮತ್ತೆ ಚಿತ್ರರಂಗಕ್ಕೆ ಕಾಲಿಡಲು ತಯಾರಾಗಿದ್ದಾರೆ ಮಯೂರಿ: ಹೇಗಿರಲಿದೆ ಎಂಟ್ರಿ?

|

Updated on: Jul 15, 2023 | 10:35 PM

Mayuri: ನಟಿ ಮಯೂರಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈ ಬಾರಿ ಯಾವ ರೀತಿಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ, ಅವರ ಯೋಜನೆಗಳೇನು? ಅವರೇ ಮಾತನಾಡಿದ್ದಾರೆ...

‘ಅಶ್ವಿನಿ ನಕ್ಷತ್ರ’ (Ashwini Nakshatra) ಧಾರಾವಾಹಿಯಲ್ಲಿ (Serial) ಮಿಂಚಿ ‘ಕೃಷ್ಣನ ಲೀಲಾ’ ಆಗಿ ದೊಡ್ಡ ಪರದೆಗೆ ಎಂಟ್ರಿ ಕೊಟ್ಟ ಮಯೂರಿ (Mayuri) ತಮ್ಮ ಪಾತ್ರಗಳ ಮೂಲಕ, ನಟನೆ ಮೂಲಕ ಸಾಕಷ್ಟು ಜನರ ಮನ ಗೆದ್ದಿದ್ದರು. ಆದರೆ ಮದುವೆ, ತಾಯ್ತನಗಳ ಜವಾಬ್ದಾರಿಯನ್ನು ನಿಭಾಯಿಸಲೆಂದು ಸಿನಿಮಾ ರಂಗದಿಂದ ತುಸು ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ಮತ್ತೆ ಚಿತ್ರರಂಗಕ್ಕೆ ಮರುಪದಾರ್ಪಣೆ ಮಾಡಲು ಮಯೂರಿ ತಯಾರಾಗಿದ್ದಾರೆ. ತಮ್ಮ ಪುನರ್ ಪ್ರವೇಶದ ಬಗ್ಗೆ ಮಯೂರಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ