Mandya: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ವೇ ಸಮಸ್ಯೆಗಳು; ಸಂಸದೆ ಸುಮಲತಾ ಪ್ರಶ್ನೆಗಳಿಗೆ ಎನ್ಹೆಚ್ಎಐ ಅಧಿಕಾರಿ ನಿರುತ್ತರ!
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಸಂಸದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (Bengaluru Mysuru Expressway) ಪ್ರತಿದಿನ ಸುದ್ದಿಯಲ್ಲಿರುತ್ತದೆ, ಕೆಟ್ಟ ಕಾರಣಗಳಿಂದಾಗಿ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ವಾಹನ ಸವಾರರು ಮತ್ತು ಜನ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಇಂದು ನಗರದಲ್ಲಿ ನಡೆದ ದಿಶಾ ಸಭೆಯಲ್ಲಿ (DISHA Meeting) ಇದೇ ವಿಷಯವನ್ನು ಪ್ರಮುಖವಾಗಿ ಚರ್ಚಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕೂತಾಗ ಮತ್ತು ನಿಂತಾಗ ಚಡಿಪಡಿಸುವ ಸ್ಥಿತಿ ಎದುರಿಸಬೇಕಾಯಿತು. ಸಂಸದೆ ಕೇಳಿದ ಪ್ರಶ್ನಗೆಳಿಗೆ ಎನ್ ಹೆಚ್ ಎ ಐ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ ಆದರೆ ಅವರು ಸಮರ್ಪಕ ಉತ್ತರ ನೀಡುವವರೆಗೆ ಸಂಸದೆ ಬಿಡಲಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೆದ್ದಾರಿಯಲ್ಲಿ ನಡೆದ ಟ್ರಕ್ ಅಫಘಾತದ ದೃಶ್ಯ ಪರದೆ ಮೇಲೆ ತೋರಿಸಿ ಅದಕ್ಕೆ ವಿವರಣೆ ಕೇಳಿದಾಗಲಂತೂ ಒಬ್ಬ ಅಧಿಕಾರಿ ಮಾತಾಡಲಾಗದೆ ಪೆ ಪೆ ಪೆ ಮಾಡಿದರು, ಈ ವಿಡಿಯೋದ ಆಡಿಯೋ ಸರಿಯಿಲ್ಲದ ಕಾರಣ ಮಾತುಗಳು ಸರಿಯಾಗಿ ಕೇಳಿಸುತ್ತಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ