ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ

Updated on: Jun 28, 2025 | 10:55 AM

ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗದ ಹಿರಿಯ ನಟಿ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.  ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

ನಟಿ ಪ್ರೇಮಾ ಅವರು ಹಿರಿತೆರೆಯಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ. ಹಾಗಂತ ಅವರು ಅಭಿಮಾನಿಗಳಿಂದ ದೂರವೇನು ಆಗಿಲ್ಲ. ಅವರು ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಮಹಾನಟಿ ಸೀಸನ್ 2’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಅವರಿದ್ದಾರೆ. ಈಗ ಅವರು ವೇದಿಕೆ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.