VIDEO: ಕೊನೆಯ ಎಸೆತದಲ್ಲಿ ಸಿಕ್ಸ್… ದಾಖಲೆಯ ರನ್ ಚೇಸ್..!
MLC 2025: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 238 ರನ್ಗಳನ್ನು ಚೇಸ್ ಮಾಡುವ ಮೂಲಕ ಸಿಯಾಟಲ್ ಓರ್ಕಾಸ್ ತಂಡವು ಅತ್ಯಧಿಕ ಟಾರ್ಗೆಟ್ ಬೆನ್ನತ್ತಿ ಗೆದ್ದ ದಾಖಲೆ ಬರೆದಿದೆ. ವಿಶೇಷ ಎಂದರೆ ಇದು ಸಿಯಾಟಲ್ ಓರ್ಕಾಸ್ ತಂಡ ಈ ಬಾರಿಯ ಮೊದಲ ಗೆಲುವುವಾಗಿದೆ. ಅಂದರೆ ಈವರೆಗೆ ಆಡಿದ 6 ಪಂದ್ಯಗಳಲ್ಲಿ ಮೊದಲ 5 ಮ್ಯಾಚ್ಗಳಲ್ಲಿ ಓರ್ಕಾಸ್ ಪಡೆ ಸೋಲನುಭವಿಸಿತ್ತು. ಇದೀಗ ದಾಖಲೆ ಗೆಲುವಿನೊಂದಿಗೆ ಸಿಯಾಟಲ್ ಓರ್ಕಾಟ್ ಜಯದ ಖಾತೆ ತೆರೆದಿದೆ.
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 18ನೇ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ತಂಡವು ರೋಚಕ ಜಯ ಸಾಧಿಸಿದೆ. ಅದು ಕೂಡ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ. ಈ ಗೆಲುವಿನ ರೂವಾರಿ ಎಡಗೈ ದಾಂಡಿಗ ಶಿಮ್ರಾನ್ ಹೆಟ್ಮೆಯರ್. ಡಲ್ಲಾಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ಪರ ನಿಕೋಲಸ್ ಪೂರನ್ (108) ಶತಕ ಸಿಡಿಸಿದ್ದರು. ಈ ಸೆಂಚುರಿ ನೆರವಿನೊಂದಿಗೆ ಎಂಐ ನ್ಯೂಯಾರ್ಕ್ ತಂಡವು 4 ವಿಕೆಟ್ ಕಳೆದುಕೊಂಡು 237 ರನ್ ಕಲೆಹಾಕಿತು.
239 ರನ್ಗಳ ಗುರಿ ಬೆನ್ನತ್ತಿದ ಸಿಯಾಟಲ್ ಓರ್ಕಾಸ್ ಪರ ಶಿಮ್ರಾನ್ ಹೆಟ್ಮೆಯರ್ ಸಿಡಿಲಬ್ಬದ ಬ್ಯಾಟಿಂಗ್ ಪ್ರದರ್ಶಿಸಿದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆಟ್ಮೆಯರ್ ಎಂಐ ನ್ಯೂಯಾರ್ಕ್ ಬೌಲರ್ಗಳನ್ನು ಬೆಂಡೆತ್ತುವ ಮೂಲಕ ರನ್ ಮಳೆ ಸುರಿಮಳೆಗೈದರು. ಪರಿಣಾಮ 19 ಓವರ್ಗಳ ಮುಕ್ತಾಯದ ವೇಳೆ ಸಿಯಾಟಲ್ ಓರ್ಕಾಸ್ ತಂಡವು 7 ವಿಕೆಟ್ ಕಳೆದುಕೊಂಡು 229 ರನ್ ಕಲೆಹಾಕಿತು.
ಅದರಂತೆ ಕೊನೆಯ ಓವರ್ನಲ್ಲಿ ಸಿಯಾಟಲ್ ತಂಡಕ್ಕೆ 9 ರನ್ಗಳ ಅವಶ್ಯಕತೆಯಿತ್ತು. ಆದರೆ ಸ್ಟ್ರೈಕ್ನಲ್ಲಿದ್ದ ಜಸ್ದೀಪ್ ಸಿಂಗ್ ಮೊದಲೆರಡು ಎಸೆತಗಳಲ್ಲಿ ಯಾವುದೇ ರನ್ಗಳಿಸಲಿಲ್ಲ. ಇನ್ನು ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ 8 ರನ್ಗಳ ಅವಶ್ಯಕತೆ. ಈ ಹಂತದಲ್ಲಿ ಶಿಮ್ರಾನ್ ಹೆಟ್ಮೆಯರ್ ಒಂದು ಬಾಲ್ ಡಾಟ್ ಮಾಡಿದರು. ಆದರೆ 5ನೇ ಎಸೆತದಲ್ಲಿ 2 ರನ್ ಓಡಿದರು.
ಕೀರನ್ ಪೊಲಾರ್ಡ್ ಎಸೆದ ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ಸಿಯಾಟಲ್ ಓರ್ಕಾಸ್ ತಂಡಕ್ಕೆ 6 ರನ್ಗಳ ಅವಶ್ಯಕತೆಯಿತ್ತು. ಈ ಎಸೆತದಲ್ಲಿ ಥರ್ಡ್ಮ್ಯಾನ್ನತ್ತ ಆಕರ್ಷಕ ಸಿಕ್ಸ್ ಸಿಡಿಸುವ ಮೂಲಕ ಶಿಮ್ರಾನ್ ಹೆಟ್ಮೆಯರ್ ಸಿಯಾಟಲ್ ಓರ್ಕಾಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇನ್ನು ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 97 ರನ್ ಬಾರಿಸಿ ಹೆಟ್ಮೆಯರ್ ಗೆಲುವಿನ ರೂವಾರಿ ಎನಿಸಿಕೊಂಡರು.
ದಾಖಲೆಯ ಚೇಸಿಂಗ್:
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 238 ರನ್ಗಳನ್ನು ಚೇಸ್ ಮಾಡುವ ಮೂಲಕ ಸಿಯಾಟಲ್ ಓರ್ಕಾಸ್ ತಂಡವು ಅತ್ಯಧಿಕ ಟಾರ್ಗೆಟ್ ಬೆನ್ನತ್ತಿ ಗೆದ್ದ ದಾಖಲೆ ಬರೆದಿದೆ. ವಿಶೇಷ ಎಂದರೆ ಇದು ಸಿಯಾಟಲ್ ಓರ್ಕಾಸ್ ತಂಡ ಈ ಬಾರಿಯ ಮೊದಲ ಗೆಲುವುವಾಗಿದೆ. ಅಂದರೆ ಈವರೆಗೆ ಆಡಿದ 6 ಪಂದ್ಯಗಳಲ್ಲಿ ಮೊದಲ 5 ಮ್ಯಾಚ್ಗಳಲ್ಲಿ ಓರ್ಕಾಸ್ ಪಡೆ ಸೋಲನುಭವಿಸಿತ್ತು. ಇದೀಗ ದಾಖಲೆ ಗೆಲುವಿನೊಂದಿಗೆ ಸಿಯಾಟಲ್ ಓರ್ಕಾಟ್ ಜಯದ ಖಾತೆ ತೆರೆದಿದೆ.

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ

‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ

ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ

ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
