‘ಮಾತು ಬರುತ್ತಿಲ್ಲ, ದರ್ಶನ್​ಗಾಗಿ ಪ್ರಾರ್ಥಿಸುತ್ತೇನೆ’; ಆಘಾತ ಹೊರಹಾಕಿದ ಸಂಜನಾ ಗಲ್ರಾನಿ

Updated on: Jun 11, 2024 | 1:49 PM

ನಟಿ ಸಂಜನಾ ಗಲ್ರಾನಿ ಅವರು ಇತ್ತೀಚೆಗೆ ಕುಟುಂಬದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ದರ್ಶನ್ ಪ್ರಕರಣದಿಂದ ಶಾಕ್​ಗೆ ಒಳಗಾಗಿದ್ದಾರೆ. ‘ಇದು ಶಾಕಿಂಗ್ ನ್ಯೂಸ್. ಅವರು ಬಿಡುಗಡೆ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರ ಹೆಸರು ಎಫ್​ಐಆರ್​​ನಲ್ಲಿರಬಾರದು ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.

ನಟ ದರ್ಶನ್ ಅವರು ಅರೆಸ್ಟ್ ಆಗಿರುವುದು ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್​ನಲ್ಲಿ ದರ್ಶನ್ ಕೈವಾಡ ಕೂಡ ಇದೆ ಎನ್ನಲಾಗಿದೆ. ಈ ಪ್ರಕರಣ ಸ್ಯಾಂಡಲ್​ವುಡ್​ ಮಂದಿಗೆ ಶಾಕಿಂಗ್ ಎನಿಸಿದೆ. ಈ ಬಗ್ಗೆ ನಟಿ ಸಂಜನಾ ಗಲ್ರಾನಿ ವಿಡಿಯೋ ಹಂಚಿಕೊಂಡಿದ್ದಾರೆ. ‘ಈ ಸುದ್ದಿ ನೋಡಿ ಶಾಕ್ ಆಗಿದೆ. ಚಿಂತೆ ಕಾಡ್ತಿದೆ. ದೇವರ ಬಳಿ ಪ್ರೇಯರ್ ಮಾಡ್ತೀನಿ. ಅವರು ಅರೆಸ್ಟ್ ಆಗಬಾರದು. ಇದು ಶಾಕಿಂಗ್ ನ್ಯೂಸ್. ಅವರು ಬಿಡುಗಡೆ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರ ಹೆಸರು ಎಫ್​ಐಆರ್​​ನಲ್ಲಿರಬಾರದು ಎಂದು ಕೇಳಿಕೊಳ್ಳುತ್ತೇನೆ. ನನಗೆ ಮಾತೇ ಬರುತ್ತಿಲ್ಲ’ ಎಂದಿದ್ದಾರೆ ಸಂಜನಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Jun 11, 2024 12:16 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More