ಉದ್ಯಮಿ ಗೌತಮ್ ಅದಾನಿಗೆ ಮಾಸ್ಟರ್ ಸ್ಟ್ರೋಕ್ – INDIA ಮೀಟಿಂಗ್​​​​ನಲ್ಲಿ ಮತ್ತೆ ಗುಡುಗಿದ ರಾಹುಲ್‌ ಗಾಂಧಿ

| Updated By: ಸಾಧು ಶ್ರೀನಾಥ್​

Updated on: Sep 01, 2023 | 2:33 PM

ಅದಾನಿ ಗ್ರೂಪ್ ಬಗ್ಗೆ ವಂಚನೆ ಮತ್ತೊಂದು ಆರೋಪ ಬರುತ್ತಿದ್ದಂತೆ ಇಂಡಿಯಾ ಮೀಟಿಂಗ್​​​​ನಲ್ಲಿದ್ದ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ರು. ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಮೂರು ಪ್ರಶ್ನೆಗಳನ್ನ ಕೇಳಿದ್ದಾರೆ.. ಜೊತೆಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದು ರಾಹುಲ್ ಆಗ್ರಹಿಸಿದ್ರು. ಈ ಆರೋಪ ಕೇಳಿ ಬರ್ತಿದ್ದಂತೆ ಅದಾನಿ ಕಂಪನಿಗಳ ಶೇರುಗಳಿಗೆ ಭಾರೀ ಹಿನ್ನಡೆಯನ್ನುಂಟಾಗಿದೆ.

ಉದ್ಯಮಿ ಗೌತಮ್ ಅದಾನಿ ( Gautam Adani) ವಿರುದ್ಧ ಮತ್ತೊಂದು ಬಾಂಬ್ ಸಿಡಿದಿದೆ. ಆಪ್ತರಿಂದಲೇ ಷೇರು ಮೌಲ್ಯ ತಿರುಚಿದ ಆರೋಪ ಕೇಳಿಬಂದಿದೆ. ಇದ್ರ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು (Rahul Gandhi) ಇದನ್ನೇ ಅಸ್ತ್ರ ಮಾಡಿಕೊಂಡು ಅದಾನಿ (Adani Group) ಮತ್ತು ಕೇಂದ್ರ ಸರ್ಕಾರದ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಶ್ವದಲ್ಲೇ ಮೂರನೇ ಶ್ರೀಮಂತ ಪಟ್ಟಕ್ಕೇರಿದ್ದ ಗೌತಮ್ ಅದಾನಿಯನ್ನು ಹಿಂಡನ್ ಬರ್ಗ್ ವರದಿ ಶೇಕ್ ಮಾಡಿತ್ತು. ಹಿಂಡನ್​​​​​ಬರ್ಗ್ ವರದಿಗೆ ರಾತ್ರೋರಾತ್ರಿ ಅದಾನಿ ಸಾಮ್ರಾಜ್ಯ ನೆಲಕಚ್ಚಿತ್ತು. ನೆಲಕಚ್ಚಿದ ಗೌತಮ್ ಅದಾನಿ ಸಾಮ್ರಾಜ್ಯ ಏಳಲು ಪ್ರಯತ್ನ ಮಾಡ್ತಿರುವಾಗ್ಲೇ ಮತ್ತೊಂದು ಏಟು ಬಿದ್ದಿದೆ. ಅದಾನಿ ಗ್ರೂಪ್ ಕೃತಕವಾಗಿ ತನ್ನ ಕಂಪನಿಗಳ ಷೇರುಗಳ ಮೌಲ್ಯ ತಿರುಚಿದೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ಯೋಜನೆ ಆರೋಪಿಸಿದೆ. ಜೊತೆಗೆ ಅದಾನಿ ಕುಟುಂಬವು ಪಾರದರ್ಶಕವಿಲ್ಲದೆ ಮಾರಿಷಸ್ ನಿಧಿಗಳ ಮೂಲಕ ತನ್ನದೇ ಕಂಪನಿಗಳಲ್ಲಿ ಕೋಟ್ಯಂತರ ಡಾಲರ್‌ಗಳನ್ನು ಹೂಡಿಕೆ ಮಾಡಿದೆ ಎಂದು ಒಸಿಸಿಆರ್‌ಪಿ ಆರೋಪ ಮಾಡಿದೆ.

ಅದಾನಿ ಗ್ರೂಪ್​ ಕಂಪನಿಗಳಲ್ಲಿ ಮಾರಿಷಸ್ ನಿಧಿಗಳ ಮೂಲಕ ರಹಸ್ಯ ಹೂಡಿಕೆ ಮಾಡಲಾಗಿದ್ದು, ಇದ್ರಲ್ಲಿ ಗೌತಮ್ ಅದಾನಿ ಹಿರಿಯ ಸೋದರ ವಿನೋದ್ ಅದಾನಿ ಅವರ ಪಾತ್ರ ಇದೆ ಎಂದು ಆರೋಪಿಸಿದೆ. ಅಲ್ದೆ ಅದಾನಿ ಗ್ರೂಪ್‌ನೊಂದಿಗೆ ನಿಕಟ ನಂಟು ಹೊಂದಿರುವ ಚಾಂಗ್ ಚುಂಗ್-ಲಿಂಗ್ ಮತ್ತು ನಾಸೀರ್ ಅಲಿ ಶಬಾನ್ ಅಹ್ಲಿ ಪ್ರಮುಖ ಹೂಡಿಕೆದಾರರಾಗಿದ್ದಾರೆ ಎಂದು ಆರೋಪಿಸಿದೆ.

ಅದಾನಿ ಗ್ರೂಪ್ ಬಗ್ಗೆ ವಂಚನೆ ಮತ್ತೊಂದು ಆರೋಪ ಬರುತ್ತಿದ್ದಂತೆ ಇಂಡಿಯಾ ಮೀಟಿಂಗ್​​​​ನಲ್ಲಿದ್ದ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ರು. ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಮೂರು ಪ್ರಶ್ನೆಗಳನ್ನ ಕೇಳಿದ್ದಾರೆ.. ಜೊತೆಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದು ರಾಹುಲ್ ಆಗ್ರಹಿಸಿದ್ರು.

ಈ ಆರೋಪ ಕೇಳಿ ಬರ್ತಿದ್ದಂತೆ ಅದಾನಿ ಕಂಪನಿಗಳ ಶೇರುಗಳಿಗೆ ಭಾರೀ ಹಿನ್ನಡೆಯನ್ನುಂಟಾಗಿದೆ. ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿವೆ. ಅದಾನಿ ಎಂಟರ್‌ ಪ್ರೈಸಸ್ ಶೇ.3.15 ರಷ್ಟು ಕುಸಿತ ಕಂಡಿದೆ. ಅದಾನಿ ಗ್ರೀನ್ ಶೇ.3.40, ಅದಾನಿ ಪವರ್ ಶೇ.2.10, ಅದಾನಿ ಟೋಟಲ್ ಗ್ಯಾಸ್ ಶೇ.2.63 ರಷ್ಟು ನಷ್ಟ ಕಂಡಿವೆ. ಆದ್ರೆ, ಈ ಆರೋಪವನ್ನ ಅದಾನಿ ಸಮೂಹ ನಿರಾಕರಿಸಿದೆ. ಈ ವಂಚನೆ ಆರೋಪ ಮತ್ತೆಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 01, 2023 02:06 PM