ಪೊಲೀಸರು ಹೆವಿವೇಟ್ ಗಳಾಗಿದ್ದರೆ ಕೆಲಸ ಮಾಡುವುದು ಕಷ್ಟ ಎಂದು ದೊಡ್ಡಹೊಟ್ಟೆಯ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು!
ಖಡಕ್ ಪೊಲೀಸ್ ಅಧಿಕಾರಿ ಅನಿಸಿಕೊಂಡಿರುವ ಅಲೋಕ್ ಕುಮಾರ್ ಇಂದು ಚಿತ್ರದುರ್ಗದ ಪೊಲೀಸ್ ಅಧಿಕಾರಿಗಳಿಗೆ ಹೊಟ್ಟೆ ಕರಗಿಸಿಕೊಳ್ಳಲು ಹೇಳಿದರು.
ಚಿತ್ರದುರ್ಗ: ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು ಫಿಟ್ ಅಂಡ್ ಫೈನ್ ಆಗಿರಬೇಕು. ನೌಕರಿಗೆ ಸೇರುವಾಗ ಎಲ್ಲರೂ ಹಾಗಿರುತ್ತಾರೆ ಆದರೆ ಸರ್ವಿಸ್ ಆಗ್ತಾ ಹೋದಂತೆ ಅವರ ‘ಮಧ್ಯಪ್ರದೇಶ’ದ (belly) ವಿಸ್ತೀರ್ಣ ಜಾಸ್ತಿಯಾಗುತ್ತಾ ಹೋಗುತ್ತದೆ. ಖಡಕ್ ಪೊಲೀಸ್ ಅಧಿಕಾರಿ ಅನಿಸಿಕೊಂಡಿರುವ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಇಂದು ಚಿತ್ರದುರ್ಗದಲ್ಲಿ (Chitradurga) ತಮ್ಮ ಅಧಿಕಾರಿಗಳಲ್ಲಿ ಗಮನಿಸಿದ್ದು ಅದನ್ನೇ. ಹಿರಿಯೂರು ಡಿವೈ ಎಸ್ ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈ ಎಸ್ ಪಿ ಅನಿಲ್, ಚಳ್ಳಕೆರೆ ಡಿವೈ ಎಸ್ ಪಿ ರಮೇಶ್, ಡಿಸಿಆರ್ ಡಿ ವೈ ಎಸ್ ಪಿ ಲೋಕೇಶ್ ಮತ್ತು ಎಸ್ ಪಿ ಕಚೇರಿಯ ಸಿಪಿಐ ನಾಗರಾಜ್ ಅವರ ಹೊಟ್ಟೆಗಳನ್ನು ನೋಡಿ ‘ನೀವೆಲ್ಲ ಹೆವಿವೇಟ್ಗಳಾಗಿದ್ದೀರಿ, ನಿಮ್ಮ ಎಸ್ ಪಿಯವರ ಹಾಗೆ ಲೈಟ್ವೇಟ್ ಆಗಿ!’ ಎಂದರು.