ಎಡಿಜಿಪಿ ಅಲೋಕ್ ಕುಮಾರ ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಜಬೀವುಲ್ಲಾ ಮತ್ತು ಪ್ರೇಮ್ ಸಿಂಗ್ ಅರೋಗ್ಯ ವಿಚಾರಿಸಿದರು
ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ (ಸೋಮವಾರ) ನಡೆದ ಜಗಳದಲ್ಲಿ ಚಾಕು ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಅರೋಗ್ಯವನ್ನೂ ಅವರು ವಿಚಾರಿಸಿದರು.
ಶಿವಮೊಗ್ಗ: ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ (Alok Kumar) ಅವರು ಮಂಗಳವಾರ ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಗೆ ತೆರಳಿ ನಿನ್ನೆ ಪೊಲೀಸರ ಗುಂಡೇಟು ತಿಂದು ಚಿಕಿತ್ಸೆ ಪಡೆಯುತ್ತಿರುವ ಜಬೀವುಲ್ಲಾನ (Zabiullah) ಆರೋಗ್ಯದ ವಿಚಾರಿಸಿದರು. ಅಲೋಕ್ ಕುಮಾರ ಅವರೊಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಜೊತೆಗಿದ್ದರು. ನಂತರ ಎಡಿಜಿಪಿಯವರು; ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ (ಸೋಮವಾರ) ನಡೆದ ಜಗಳದಲ್ಲಿ ಚಾಕು ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ (Prem Singh) ಅರೋಗ್ಯವನ್ನೂ ಅವರು ವಿಚಾರಿಸಿದರು.