ಕರ್ನಾಟಕದಲ್ಲೂ I Love ಮೊಹಮ್ಮದ್ ಅಬ್ಬರ​​: ಖಡಕ್ ಎಚ್ಚರಿಕೆ ನೀಡಿದ ಎಡಿಜಿಪಿ

Updated on: Oct 06, 2025 | 6:46 PM

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊತ್ತಿಕೊಂಡ 'ಐ ಲವ್ ಮುಹಮ್ಮದ್' ಕರ್ನಾಟಕಕ್ಕೂ ಕಾಲಿಟ್ಟಿದೆ. ರಾಜ್ಯದ 4 ಕಡೆ ಲವ್ ಯೂ ಮೊಹಮ್ಮದ್​​ ಘೋಷಣೆ ಮೊಳಗಿದೆ. ಬೆಳಗಾವಿ, ದಾವಣಗೆರೆ, ಆಳಂದ ಸೇರಿ 4 ಕಡೆ ಘಟನೆ ನಡೆದಿದ್ದು, ಘಟನೆ ಸಂಬಂಧ ಈಗಾಗಲೇ ಎರಡು FIR ದಾಖಲಾಗಿದೆ. ಇನ್ನು ಈ ಬಗ್ಗೆ ಟಿವಿ9ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಪ್ರತಿಕ್ರಿಯಿಸಿದ್ದು, ಖಡಕ್ ಸಂದೇಶ ರವಾನಿಸಿದ್ದಾರೆ

ಬೆಂಗಳೂರು, (ಅಕ್ಟೋಬರ್ 06): ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊತ್ತಿಕೊಂಡ ‘ಐ ಲವ್ ಮುಹಮ್ಮದ್’ ಕರ್ನಾಟಕಕ್ಕೂ ಕಾಲಿಟ್ಟಿದೆ. ರಾಜ್ಯದ 4 ಕಡೆ ಲವ್ ಯೂ ಮೊಹಮ್ಮದ್​​ ಘೋಷಣೆ ಮೊಳಗಿದೆ. ಬೆಳಗಾವಿ, ದಾವಣಗೆರೆ, ಆಳಂದ ಸೇರಿ 4 ಕಡೆ ಘಟನೆ ನಡೆದಿದ್ದು, ಘಟನೆ ಸಂಬಂಧ ಈಗಾಗಲೇ ಎರಡು FIR ದಾಖಲಾಗಿದೆ. ಇನ್ನು ಈ ಬಗ್ಗೆ ಟಿವಿ9ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಪ್ರತಿಕ್ರಿಯಿಸಿದ್ದು, ರಾಜ್ಯದ 4 ಕಡೆ ಲವ್ ಯೂ ಮೊಹಮ್ಮದ್​​ ಘೋಷಣೆ ಪ್ರಕರಣಗಳು ದಾಖಲಾಗಿವೆ. ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಸಮರ್ಪಕವಾಗಿದೆ. ಅಹಿತಕರ ಘಟನೆಗಳಿಗೆ ಇಲಾಖೆ ಅವಕಾಶ ನೀಡುವುದಿಲ್ಲ.ಕಾನೂನು ಸುವ್ಯವಸ್ಥೆ ಧಕ್ಕೆ ತರಲು ಯತ್ನಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.