ಟಿವಿ9 ಇಂಪ್ಯಾಕ್ಟ್: ಬೆಳಗಾವಿ ಹಿಂಡಲಗಾ ಜೈಲಿನ ಅವ್ಯವಹಾರಗಳ ವರದಿ ಬಳಿಕ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಭೇಟಿ

|

Updated on: Dec 18, 2024 | 10:57 AM

ವರದಿಗಳು ಬಿತ್ತರವಾದ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಎಲ್ಲ ಜೈಲುಗಳ ಕತೆ ಹೀಗಾದರೆ ಅಪರಾಧಿಗಳನ್ನು ಅರೆಸ್ಟ್ ಮಾಡಿ ಅಲ್ಲಿಡುವುದರಲ್ಲಿ ಅರ್ಥವಿಲ್ಲ. ಗೃಹ ಸಚಿವ ಪರಮೇಶ್ವರ್ ಸೆಂಟ್ರಲ್ ಮತ್ತು ಇತರ ಜೈಲುಗಳ ಕಾಯಕಲ್ಪಕ್ಕೆ ಮುಂದಾಗಬೇಕು. ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಯಾಕೆ ಶಿಫ್ಟ್ ಮಾಡಲಾಯಿತು ಅಂತ ಎಲ್ಲರಿಗೂ ಗೊತ್ತು.

ಬೆಳಗಾವಿ: ನಮ್ಮ ರಾಜ್ಯದ ಕೈದಿಗಳು ಹೊರಗಿನ ಜಗತ್ತಿಗಿಂತ ಜೈಲಿನೊಳಗೆ ಸ್ವಚ್ಛಂದ ಮತ್ತು ಆರಾಮದಾಯಕ ಬದುಕು ನಡೆಸುತ್ತಿದ್ದಾರೆ. ಜೈಲಿನೊಳಗೆ ಅವರಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಬಗ್ಗೆ ನಾವು ಪದೇಪದೆ ವರದಿ ಮಾಡುತ್ತಿದ್ದೇವೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳು ಇಸ್ಪೀಟ್ ಆಡುತ್ತಿರುವ, ಗಾಂಜಾ ಸೇದುತ್ತಿರುವ, ಮದ್ಯ ಸೇವಿಸುತ್ತಿರುವ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಹಿಂಡಲಗಾ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಜೈಲು ಅಧಿಕಾರಿಗಳಿಗೆ ತಾಕೀತು ಮಾಡುತ್ತಿರುವುದನ್ನು ಇಲ್ಲಿ ಕಾಣಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಗಾಂಜಾಗಾಗಿ ಜೈಲು ಅಧಿಕಾರಿ ಮೇಲೆ ಹಲ್ಲೆ