ಕಾಯಕದ ಜೊತೆ ಜ್ಞಾನವೂ ಇರಬೇಕೆಂಬುದಕ್ಕೆ ಪ್ರಧಾನಿ ಮೋದಿ ಉದಾಹರಣೆ; ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣನೆ
ಕೆಂಪೇಗೌಡರಂತೆ ನರೇಂದ್ರ ಮೋದಿ ಅವರು ಸಹ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ. ಜನರಲ್ಲಿ ಕೌಶಲ ಅಭಿವೃದ್ಧಿಗಾಗಿ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ನಮ್ಮ ನಾಡಪ್ರಭು ಕೆಂಪೇಗೌಡರು (Kempegowda) ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಮೋದಿ ಅವರು ಸಹ ದೇಶದ ಅತ್ಯುತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ. ಹಿಂದೆ ಜಗತ್ತಿನ ಬೇರೆ ದೇಶಗಳು ತಮ್ಮನ್ನು ಕೇಳಿ ಅಧಿಕಾರ ಮಾಡಿ ಎನ್ನುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಗತ್ತು ನಮ್ಮನ್ನು ಕೇಳುತ್ತಿದೆ. ಜ್ಞಾನಿ ದೇಶವನ್ನು ಆಳಬೇಕು ಎಂದು ಪ್ಲೇಟೊ ಹೇಳಿದ್ದರು. ಕೆಂಪೇಗೌಡರ ಮಾದರಿಯಲ್ಲಿ ನರೇಂದ್ರ ಮೋದಿ ಸಹ ಕಾಯಕದ ಜೊತೆಗೆ ಜ್ಞಾನವೂ ಇರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೆಂಪೇಗೌಡರಂತೆ ನರೇಂದ್ರ ಮೋದಿ (Narendra Modi) ಅವರು ಸಹ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ. ಜನರಲ್ಲಿ ಕೌಶಲ ಅಭಿವೃದ್ಧಿಗಾಗಿ ಹಲವು ಕ್ರಮಗಳನ್ನು ಮೋದಿ ತೆಗೆದುಕೊಂಡಿದ್ದಾರೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.