ಆದಿತ್ಯ ಎಲ್1 ಮಿಶನ್ 125 ದಿನಗಳ ಬಳಿಕ ಅಂತರಿಕ್ಷದಲ್ಲಿ ನಿಗದಿತ ಸ್ಥಳ ತಲುಪಲಿದೆ: ಎಸ್ ಸೋಮನಾಥ್, ಇಸ್ರೋ ಮುಖ್ಯಸ್ಥ

|

Updated on: Sep 02, 2023 | 10:29 AM

ಉಡ್ಡಯನದ 125 ದಿನಗಳ ನಂತರ ಆದಿತ್ಯ ಎಲ್-1 ಅಂತರಿಕ್ಷದಲ್ಲಿ ನಿರ್ಧಾರಿತ ಸ್ಥಳ (ಎಲ್1 ಪಾಯಿಂಟ್) ತಲುಪಿ ಸೂರ್ಯನ ಅಧ್ಯಯನ ಆರಂಭಿಸಲಿದೆ ಎಂದು ಸೋಮನಾಥ ಹೇಳಿದರು. ಚಂದ್ರನಲ್ಲಿ ಲ್ಯಾಂಡ್ ಆಗಿರುವ ಪ್ರಗ್ಯಾನ್ ಆದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ ಅವರು, ಇಸ್ರೋದ ಮುಂದಿನ ಮಿಷನ್ ವಿಎಸ್​ಎಲ್​ವಿ ಲಾಂಚ್ ಆಗಿದ್ದು ಅದು ಅಕ್ಟೋಬರ್ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಹಾರಿಬಿಡಲಾಗುವುದು ಎಂದರು.

ಹೈದರಾಬಾದ್: ಚಂದ್ರಯಾನ-3 ಅಭಿಯಾನದ (Chandrayaan-3 success) ಪ್ರಚಂಡ ಯಶಸ್ಸಿನಿಂದ ಉತ್ಸಾಹದ ಚಿಲುಮೆಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) (ISRO) ವಿಜ್ಞಾನಿಗಳು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಸೂರ್ಯನ ಅಧ್ಯಯನ ನಡೆಸಲು ಇಸ್ರೋ ಇಂದು ಬೆಳಗ್ಗೆ 11.50 ಕ್ಕೆ ಶ್ರೀಹರಿಕೋಟಾದಿಂದ ಆದಿತ್ಯ ಎಲ್1 ಮಿಶನ್ (Aditya L1 Mission) ಬಾಹ್ಯಾಕಾಶಕ್ಕೆ ಹಾರಿಬಿಡಲಿದೆ. ಈ ಅಭಿಯಾನವೂ ಸಫಲವಾಗಲಿ ಮತ್ತು ಉದ್ದೇಶಿತ ಗುರಿ ಸಾಧಿಸಲಿ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ (S Somanath) ಶುಕ್ರವಾರದಂದು ಆಂಧ್ರಪ್ರದೇಶದ ತಿರುಪತಿ ಸುಳ್ಳೂರುಪೇಟೆಯ ಚೆಂಗಾಲಮ್ಮ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಉಡ್ಡಯನದ 125 ದಿನಗಳ ನಂತರ ಆದಿತ್ಯ ಎಲ್-1 ಅಂತರಿಕ್ಷದಲ್ಲಿ ನಿರ್ಧಾರಿತ ಸ್ಥಳ (ಎಲ್1 ಪಾಯಿಂಟ್) ತಲುಪಿ ಸೂರ್ಯನ ಅಧ್ಯಯನ ಆರಂಭಿಸಲಿದೆ ಎಂದು ಹೇಳಿದರು. ಚಂದ್ರನಲ್ಲಿ ಲ್ಯಾಂಡ್ ಆಗಿರುವ ಪ್ರಗ್ಯಾನ್ ಆದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ ಸೋಮನಾಥ್, ಇಸ್ರೋದ ಮುಂದಿನ ಮಿಷನ್ ವಿಎಸ್ ಎಲ್ ವಿ ಲಾಂಚ್ ಆಗಿದ್ದು ಅದು ಅಕ್ಟೋಬರ್ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಹಾರಿಬಿಡಲಾಗುವುದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on