AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿತ್ಯ ಎಲ್1 ಮಿಷನ್ ಲಾಂಚ್; ಧಾರವಾಡದ ನರ್ಸರಿ ಶಾಲೆಯೊಂದರ ಪುಟಾಣಿಗಳಿಂದ ನಾಟಕ ಪ್ರದರ್ಶನ

ಆದಿತ್ಯ ಎಲ್1 ಮಿಷನ್ ಲಾಂಚ್; ಧಾರವಾಡದ ನರ್ಸರಿ ಶಾಲೆಯೊಂದರ ಪುಟಾಣಿಗಳಿಂದ ನಾಟಕ ಪ್ರದರ್ಶನ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 02, 2023 | 11:10 AM

ಶಾಲೆಯ ಪುಟಾಣಿಗಳು ಭೂಮಿ, ಚಂದ್ರ, ಸೂರ್ಯ, ಪ್ರಗ್ಯಾನ್ ಮೊದಲಾದವುಗಳನ್ನು ಪ್ರತಿಬಿಂಬಿಸುವ ವೇಷಗಳನ್ನು ತೊಟ್ಟು ತಮಗೆ ಶಿಕ್ಷಕಿಯರು ಹೇಳಿಕೊಟ್ಟ ಮಾತುಗಳನ್ನಾಡಿದರು. ಮಕ್ಕಳ ಅಭಿನಯ, ತೊದಲು ನುಡಿಗಳ ಡೈಲಾಗ್ ಡೆಲಿವರಿ ಪೋಷಕರಿಗೆ ಮತ್ತು ಶಾಲಾ ಆವರಣದಲ್ಲಿ ನೆರೆದಿದ್ದ ಜನರ ಮನಸ್ಸಿಗೆ ಮುದನೀಡಿತು.

ಧಾರವಾಡ: ಭಾರತದಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿದೆ. ಆದಿತ್ಯ ಎಲ್1 ಮಿಷನ್ ಲಾಂಚ್ (Aditya L1 Mission launch) ಇವತ್ತಿನ ಸಂಭ್ರಮಕ್ಕೆ ಕಾರಣ ಅಂತ ನಿಮಗೂ ಗೊತ್ತು. ಹಲವಾರು ಕಡೆಗಳಲ್ಲಿ ಜನ ದೇವಸ್ಥಾನಗಳಿಗೆ ತೆರಳಿ ಈ ಮಿಷನ್ ಕೂಡ ಚಂದ್ರಯಾನ-3 (Chandrayaan-3) ಆಭಿಯಾನದಂತೆ ಸಫಲವಾಗಲಿ ಅಂತ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಧಾರವಾಡದ ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ (nursery school kids) ವಿಭಾಗದ ಮಕ್ಕಳು, ಆದಿತ್ಯ ಎಲ್1 ಮಿಷನ್ ಲಾಂಚ್ ಶುಭ ಸಂದರ್ಭದಲ್ಲಿ ಚಂದ್ರಯಾನ-3 ಮತ್ತು ಇವತ್ತಿನ ಲಾಂಚ್ ಗೆ ಸಂಬಂಧಿಸಿದಂತೆ ನಾಟಕ ಪ್ರದರ್ಶಿಸಿದರು. ಶಾಲೆಯ ಪುಟಾಣಿಗಳು ಭೂಮಿ, ಚಂದ್ರ, ಸೂರ್ಯ, ಪ್ರಗ್ಯಾನ್ ಮೊದಲಾದವುಗಳನ್ನು ಪ್ರತಿಬಿಂಬಿಸುವ ವೇಷಗಳನ್ನು ತೊಟ್ಟು ತಮಗೆ ಶಿಕ್ಷಕಿಯರು ಹೇಳಿಕೊಟ್ಟ ಮಾತುಗಳನ್ನಾಡಿದರು. ಮಕ್ಕಳ ಅಭಿನಯ, ತೊದಲು ನುಡಿಗಳ ಡೈಲಾಗ್ ಡೆಲಿವರಿ ಪೋಷಕರಿಗೆ ಮತ್ತು ಶಾಲಾ ಆವರಣದಲ್ಲಿ ನೆರೆದಿದ್ದ ಜನರ ಮನಸ್ಸಿಗೆ ಮುದನೀಡಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ