೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!
New Zealand vs Afghanistan: ಅಫ್ಘಾನಿಸ್ತಾನ್ ತಂಡದ 180+ ರನ್ಗಳ ಗೆಲುವಿನ ನಾಗಾಲೋಟಕ್ಕೆ ತೆರೆ ಬಿದ್ದಿದೆ. ಅಂದರೆ ಅಫ್ಘಾನಿಸ್ತಾನ್ ತಂಡವು ಟಿ20 ಕ್ರಿಕೆಟ್ನಲ್ಲಿ 26 ಮ್ಯಾಚ್ಗಳಲ್ಲಿ 180 ಕ್ಕಿಂತ ಸ್ಕೋರ್ಗಳಿಸಿದ್ದಾರೆ. ಈ ವೇಳೆ 25 ಬಾರಿ ಗೆಲುವು ದಾಖಲಿಸಿದ್ದರು. ಇದೀಗ 26ನೇ ಪಂದ್ಯದಲ್ಲಿ ಅಫ್ಘಾನ್ ತಂಡಕ್ಕೆ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ.
ಟಿ20 ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನ್ ತಂಡವು ಈವರೆಗೆ 160 ಪಂದ್ಯಗಳನ್ನಾಡಿದೆ. ಈ 160 ಮ್ಯಾಚ್ಗಳಲ್ಲಿ ಸೋತಿರುವುದು ಕೇವಲ 61 ಪಂದ್ಯಗಳಲ್ಲಿ ಮಾತ್ರ. ಇನ್ನು 96 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದರಲ್ಲಿ 25 ಗೆಲುವುಗಳನ್ನು ಅಮೋಘ ಜಯ ಎನ್ನಬಹುದು.
ಏಕೆಂದರೆ ಅಫ್ಘಾನಿಸ್ತಾನ್ ತಂಡವು 180+ ರನ್ಗಳಿಸಿದಾಗ ಹೊಸ ಚರಿತ್ರೆಯೇ ಇರಲಿಲ್ಲ. ಬೃಹತ್ ಮೊತ್ತ ಪೇರಿಸಿದರೆ ಈ ಪಂದ್ಯವನ್ನು ಅಫ್ಘಾನ್ ಬೌಲರ್ಗಳು ಗೆಲ್ಲಿಸಿಕೊಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ್ 180+ ರನ್ಗಳಿಸಿ ಸೋಲನುಭವಿಸಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ 20 ಓವರ್ಗಳಲ್ಲಿ ಬರೋಬ್ಬರಿ 182 ಕಲೆಹಾಕಿದ್ದರು. ಈ ಗುರಿಯನ್ನು ನ್ಯೂಝಿಲೆಂಡ್ ತಂಡ 17.5 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ.
ಇದರೊಂದಿಗೆ ಅಫ್ಘಾನಿಸ್ತಾನ್ ತಂಡದ 180+ ರನ್ಗಳ ಗೆಲುವಿನ ನಾಗಾಲೋಟಕ್ಕೆ ತೆರೆ ಬಿದ್ದಿದೆ. ಅಂದರೆ ಅಫ್ಘಾನಿಸ್ತಾನ್ ತಂಡವು ಟಿ20 ಕ್ರಿಕೆಟ್ನಲ್ಲಿ 26 ಮ್ಯಾಚ್ಗಳಲ್ಲಿ 180 ಕ್ಕಿಂತ ಸ್ಕೋರ್ಗಳಿಸಿದ್ದಾರೆ. ಈ ವೇಳೆ 25 ಬಾರಿ ಗೆಲುವು ದಾಖಲಿಸಿದ್ದರು. ಇದೀಗ 26ನೇ ಪಂದ್ಯದಲ್ಲಿ ಅಫ್ಘಾನ್ ತಂಡಕ್ಕೆ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ.
ಕುಶಿನಗರದಲ್ಲಿ ಪ್ರವಾಹದ ಸ್ಥಳಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ
ಪಂಚಮಸಾಲಿ ಗುರುಪೀಠದಲ್ಲಿ '10 ಕೋಟಿ ರೂ.' ಅನುದಾನ ದುರುಪಯೋಗ ಆರೋಪ
ಏನಾದ್ರೂ ಹೇಳಿದ್ರೆ ಅಳುತ್ತ ಕೂರ್ತೀಯ: ಶಾಸ್ತ್ರಿ ಮುಖವಾಡ ಬಯಲು ಮಾಡಿದ ಜಗ್ಗ
ಪಾಕ್ ಗಡಿ ಬಳಿ ಹೈವೇ ಮೇಲೆಯೇ ಲ್ಯಾಂಡ್ ಆದ ಭಾರತೀಯ ಸೇನಾ ಹೆಲಿಕಾಪ್ಟರ್!

