ಅಶ್ವಿನಿ-ಜಾನ್ವಿ ಬಳಿಕ ರಕ್ಷಿತಾ ಶೆಟ್ಟಿ ಮೇಲೆ ರಾಶಿಕಾ ಕಣ್ಣು; ಜಗಳವೋ ಜಗಳ

Updated By: ರಾಜೇಶ್ ದುಗ್ಗುಮನೆ

Updated on: Oct 21, 2025 | 9:03 AM

ರಾಶಿಕಾ ಅವರು ಇತ್ತೀಚೆಗೆ ದೊಡ್ಮನೆಯಲ್ಲಿ ಸೈಲೆಂಟ್ ಆಗಿ ಇರೋದನ್ನು ನೀವು ಕಾಣಬಹುದು. ಈಗ ರಕ್ಷಿತಾ ಶೆಟ್ಟಿ ಅವರ ಜೊತೆ ರಾಶಿಕಾ ಜಗಳ ಆರಂಭಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.

ಇತ್ತೀಚೆಗೆ ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಕಿರಿಕ್ ಮಾಡಿಕೊಂಡಿದ್ದರು. ಅಶ್ವಿನಿ ಹಾಗೂ ಜಾನ್ವಿ ಅವರು ನೇರವಾಗಿ ಹೋಗಿ ರಕ್ಷಿತಾ ಜೊತೆ ಕಾಲುಕೆರೆದುಕೊಂಡು ಜಗಳ ಆಡಿದ್ದನ್ನು ನೀವು ನೋಡಿರಬಹುದು. ಈಗ ಜಾನ್ವಿ ಹಾಗೂ ಅಶ್ವಿನಿ ಜೊತೆ ರಕ್ಷಿತಾ ಶೆಟ್ಟಿ ರಾಜಿ ಮಾಡಿಕೊಂಡಂತೆ ಕಾಣುತ್ತಿದೆ. ಈ ಬೆನ್ನಲ್ಲೇ ರಾಶಿಕಾ ಕಣ್ಣು ಜಾನ್ವಿ ಮೇಲೆ ಬಿದ್ದಿದೆ. ನಾಮಿನೇಷನ್ ವಿಚಾರಕ್ಕೆ ರಾಶಿಕಾ ಹಾಗೂ ರಕ್ಷಿತಾ ಜಗಳ ಆಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.