Assembly Polls: ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿ ಹೆಚ್ ಪಿ ಸ್ವರೂಪ್ರಿಂದ ಕ್ಷೇತ್ರ ಪರ್ಯಟನೆ ಆರಂಭ!
ಆದರೆ, ಭವಾನಿ ಅವರ ಹಿಂದೆ ಇರುವಷ್ಟು ಜನ ಸ್ವರೂಪ್ ಜೊತೆ ಇಲ್ಲ ಅನ್ನೋದು ವಿಡಿಯೋದಲ್ಲಿ ಗೊತ್ತಾಗುತ್ತದೆ. ಭವಾನಿ ಅವರ ಮುಂದಿನ ನಡೆ ಬಗ್ಗೆ ಕುತೂಹಲವಂತೂ ಇದ್ದೇ ಇದೆ.
ಹಾಸನ: ಬಿರುಗಾಳಿಗೆ ಮೊದಲು ನೀರವತೆ ಆವರಿಸಿರುತ್ತದೆ ಅಂತ ಹೇಳುವುದನ್ನು ನಾವೆಲ್ಲ ಕೇಳಿದ್ದೇವೆ. ಹಾಸನ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಅಂತ ಹಟಕ್ಕೆ ಬಿದಿದ್ದ ಭವಾನಿ ರೇವಣ್ಣ (Bhavani Revanna) ಅವರು ಹೆಚ್ ಡಿ ರೇವಣ್ಣ ಮಧ್ಯಸ್ಥಿತೆ ವಹಿಸಿದ ಬಳಿಕ ಮೌನವಾಗಿರುವುದನ್ನು ನೋಡಿದರೆ ಅಂಥ ಭಾವನೆ ಹುಟ್ಟುತ್ತದೆ. ಏತನ್ಮಧ್ಯೆ, ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಮತ್ತು ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಆದ್ಯತೆಯಾಗಿರುವ ಹೆಚ್ ಪಿ ಸ್ವರೂಪ್ (HP Swaroop) ಭವಾನಿ ಸುಮ್ಮನಾಗುತ್ತಿದ್ದಂತೆಯೇ ತಾನೇ ಅಭ್ಯರ್ಥಿ ಅಂತ ಬೀಗುತ್ತಾ ಹಳ್ಳಿಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆಯ ಕೆಲಸ ಶುರುವಿಟ್ಟುಕೊಂಡಿದ್ದಾರೆ. ಆದರೆ, ಭವಾನಿ ಅವರ ಹಿಂದೆ ಇರುವಷ್ಟು ಜನ ಸ್ವರೂಪ್ ಜೊತೆ ಇಲ್ಲ ಅನ್ನೋದು ವಿಡಿಯೋದಲ್ಲಿ ಗೊತ್ತಾಗುತ್ತದೆ. ಭವಾನಿ ಅವರ ಮುಂದಿನ ನಡೆ ಬಗ್ಗೆ ಕುತೂಹಲವಂತೂ ಇದ್ದೇ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos