ಕೆಆರ್​ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಹರಿದ ನೀರು, ಮಂಡ್ಯಭಾಗದ ರೈತರಲ್ಲಿ ಸಂತಸ

ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2025 | 11:15 AM

ಜಲಾಶಯದಲ್ಲಿ ನೀರಿಲ್ಲವೆಂದರೆ ಅದನ್ನು ರೈತರು ಅರ್ಥಮಾಡಿಕೊಳ್ಳುತ್ತಾರೆ. ಅದರೆ ಅದು ಗರಿಷ್ಠಮಟ್ಟದವರಗೆ ತುಂಬಿ ನೀರನ್ನು ಪುನಃ ನದಿಗೆ ಹರಿಬಿಟ್ಟು ಅದು ಪಕ್ಕದ ತಮಿಳುನಾಡುಗೆ ಹರಿದು ಹೋಗವುದನ್ನು ನೋಡುವುದು ಪ್ರಾಯಶಃ ಸರ್ಕಾರಕ್ಕೆ ವಿಕೃತಾನಂದ ನೀಡುತ್ತಿರಬಹುದು. ಕಳೆದೊಂದು ವಾರದ ಅವಧಿಯಿಂದ ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜಡತ್ವ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಮಂಡ್ಯ, ಜುಲೈ 9: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ, ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಕೆಅರ್​ಎಸ್ ಜಲಾಶಯ ತುಂಬಿ ತುಳುಕುತ್ತಿದೆ ಮತ್ತು ಹೆಚ್ಚುವರಿ ನೀರು ನದಿ ಮೂಲಕ ತಮಿಳುನಾಡುಗೆ ಹರಿದುಹೋಗುತ್ತಿದೆ. ಆದರೆ ನಮ್ಮ ಘನ ಸರ್ಕಾರ (state government) ತುಂಬಿದ ಜಲಾಶಯದಿಂದ ನಾಲೆಗೆ ನೀರು ಬಿಡದೆ ಮಂಡ್ಯ ಭಾಗದ ರೈತರ ಆಕ್ರೋಶಕ್ಕೆ ಗುರಿಯಾಗಿತ್ತು. ಅನ್ನದಾತರ ಕೋಪದಿಂದ ಅಳುಕಿದ ಸರ್ಕಾರ ನಿನ್ನೆ ತಡರಾತ್ರಿಯಿಂದ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಿದೆ. ನಾಲೆಯಲ್ಲಿ ಹರಿಯವ ನೀರನ್ನು ಕಂಡು ರೈತರು ಪಡುವ ಆನಂದ ಸರ್ಕಾರಕ್ಕೆ ಗೊತ್ತಾಗುವುದಿಲ್ಲವೇನೋ?

ಇದನ್ನೂ ಓದಿ: ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಮೊದಲ ತಿಂಗಳಲ್ಲೇ ಜಲಾಶಯದಲ್ಲಿ 100 ಅಡಿ ನೀರು!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.