ನಾಮಪತ್ರ ಸಲ್ಲಿಸಿದ ನಂತರ ಗೋವಿಂದ ಕಾರಜೋಳ ಕಣ್ಣೀರು ಹಾಕಿದ್ದು ಯಾಕಾಗಿ ಗೊತ್ತಾ?

|

Updated on: Apr 15, 2023 | 7:22 PM

ಬಿಜೆಪಿ ಹಿರಿಯ ನಾಯಕ ಗೋವಿಂದ ಎಂ ಕಾರಜೋಳ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ನಂತರ ಸುದ್ದಿಗೋಷ್ಠಿ ನಡೆಸಿ ರಾಜಕೀಯ ಜೀವನಕ್ಕೆ ತನ್ನನ್ನು ಕರೆತಂದ ವ್ಯಕ್ತಿಯನ್ನು ನೆನೆದು ಕಣ್ಣೀರು ಹಾಕಿದರು.

ಬಾಗಲಕೋಟೆ: ಬಿಜೆಪಿ ಹಿರಿಯ ನಾಯಕ ಗೋವಿಂದ ಎಂ ಕಾರಜೋಳ (Govind M Karjol) ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ನಂತರ ಸುದ್ದಿಗೋಷ್ಠಿ ನಡೆಸಿ ರಾಜಕೀಯ ಜೀವನಕ್ಕೆ ತನ್ನನ್ನು ಕರೆತಂದ ವ್ಯಕ್ತಿಯನ್ನು ನೆನೆದು ಕಣ್ಣೀರು ಹಾಕಿದರು. ಹೌದು, 1994ರಲ್ಲಿ ಅಂದು ಜನತಾದಳ ಮುಖಂಡ ಎಸ್ ಎಸ್ ಮಲಘಾಣ (SS Malaghana) ಅವರು ವಿಜಯಪುರಕ್ಕೆ ಬಂದು ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದರು. ಅವರನ್ನೆ ನೆನಪಿಸಿಕೊಳ್ಳಬೇಕು. ದಿ. ರಾಮಕೃಷ್ಟ ಹೆಗಡೆ, ಎಸ್ ಆರ್ ಬೊಮ್ಮಾಯಿ ಅವರನ್ನ ನೆನೆಸಿಕೊಳ್ಳಬೇಕು. 29 ವರ್ಷ ಮುಧೋಳದ ಜನರು ಪ್ರೀತಿ ವಿಶ್ವಾಸದಿಂದ ಇದ್ದಾರೆ. ನಾನು ಈ ಸಲ ಬೇಡ ಎಂದಿದ್ದೆ. ಜನರ ಬಯಕೆ ಇದೆ ನಿಲ್ಲುವಂತೆ ಒತ್ತಾಯ ಮಾಡಿದರು. ಇಂದು ಮಲಘಾಣ ಸಾಹೇಬರು ಬದುಕಿರಬೇಕಿತ್ತು. ನನ್ನ ಮೊದಲ ಚುನಾವಣೆಯಲ್ಲಿ ಮಲಘಾಣ ಇದ್ದವರು. ಇದು ನನ್ನ ಕೊನೆ ಚುನಾವಣೆ ಅವರು ಬದುಕಿರಬೇಕಿತ್ತು ಎಂದು ಹೇಳುತ್ತಲೇ ಕಣ್ಣೀರು ಹಾಕಿದರು. ಐದು ವರ್ಷ ಶಕ್ತಿ ಇರುವರೆಗೂ ಕೆಲಸ ಮಾಡುವೆ ಎಂದರು.

ಇದನ್ನೂ ಓದಿ: ಹೆಲಿಕಾಪ್ಟರ್​ನಲ್ಲಿ ಕೊಪ್ಪಳಕ್ಕೆ ಬಂದ ಸಿದ್ದರಾಮಯ್ಯ ನೋಡಲು ಹೆಲಿಪ್ಯಾಡ್​ಗೆ ನುಗ್ಗಿದ ಜನ! ವಿಡಿಯೋ ಇಲ್ಲಿದೆ

ಮತ್ತಷ್ಟು ವಿಡಿಯೋ ಸ್ಟೋರಿಗಾಗಿ ಇಲ್ಲಿ ಕ್ಲಿಕ್ ಮಾಡಿ