ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ ಕ್ರೆಡಿಟ್ ವಾರ್​: ವಿಪಕ್ಷಗಳು ಆಲಮಟ್ಟಿ ಜಂಗಮರಂತೆ ಕನಸು ಕಾಣುತ್ತಿವೆ; ಕಾರಜೋಳ ವ್ಯಂಗ್ಯ

ನಾಳೆ (ಮಾ.12) ರಂದು ಲೋಕಾರ್ಪಣೆಗೊಳ್ಳುವ ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇಯ ಕ್ರೆಡಿಟ್​ ಪಡೆದುಕೊಳ್ಳಲು ವಿಪಕ್ಷಗಳು ಯತ್ನ ನಡೆಸುತ್ತಿವೆ. ಈ ವಿಚಾರವಾಗಿ ಸಚಿವ ಗೋವಿಂದ ಕಾರಜೋಳ ಆಲಮಟ್ಟಿ ಜಂಗಮರ ಕಥೆ ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ ಕ್ರೆಡಿಟ್ ವಾರ್​: ವಿಪಕ್ಷಗಳು ಆಲಮಟ್ಟಿ ಜಂಗಮರಂತೆ ಕನಸು ಕಾಣುತ್ತಿವೆ; ಕಾರಜೋಳ ವ್ಯಂಗ್ಯ
ಸಚಿವ ಗೋವಿಂದ ಕಾರಜೋಳ
Follow us
|

Updated on: Mar 11, 2023 | 3:11 PM

ವಿಜಯಪುರ: ನಾಳೆ (ಮಾ.12) ರಂದು ಲೋಕಾರ್ಪಣೆಗೊಳ್ಳುವ ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇಯ (Bengaluru-Mysore Express Way) ಕ್ರೆಡಿಟ್​ ಪಡೆದುಕೊಳ್ಳಲು ವಿಪಕ್ಷಗಳು ಯತ್ನ ನಡೆಸುತ್ತಿವೆ. ಈ ವಿಚಾರವಾಗಿ ಸಚಿವ ಗೋವಿಂದ ಕಾರಜೋಳ (Govind Karjol) ಆಲಮಟ್ಟಿ ಜಂಗಮರ ಕಥೆ ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ. ಆಲಮಟ್ಟಿಯಲ್ಲಿ 12 ನೇ ಶತಮಾನದಲ್ಲಿ ಜಂಗಮರು ಇದ್ದರಂತೆ. ಇದು ಬಹಳ‌ ಒಳ್ಳೆ ಜಾಗ ಇದೆ, ಇಲ್ಲಿ ಡ್ಯಾಂ ಕಟ್ಟೋಣ ಎಂದು ಅವರು ಕನಸು ಕಾಣುತ್ತಿದ್ದರಂತೆ. ಹಾಗಾಗಿದೆ ವಿಪಕ್ಷಗಳ ಸ್ಥಿತಿ ಎಂದು ಕಾಂಗ್ರೆಸ್, ಜೆಡಿಎಸ್​​ ಪಕ್ಷಗಳನ್ನು ಕಿಚಾಯಿಸಿದರು.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆ ನಡೆಯುತ್ತಿದ್ದು, ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಷ್ಟು ದೂರ ಯಾಕೆ, ವಿಜಯಪುರದ್ದೇ ವಿಚಾರ ಹೇಳುತ್ತೇನೆ. 1984-85 ರಲ್ಲಿ ನಾನು ವಿಜಯಪುರ ವಿಮಾನ ನಿಲ್ದಾಣದ ಬಗ್ಗೆ ಪ್ಲಾನ್ ಮಾಡಿದ್ದೆ. ನಾನು ಮಂತ್ರಿ ಆದ ಬಳಿಕ 725 ಎಕರೆ ಭೂಮಿ ತಗೊಂಡು ವಿಮಾನ‌ ನಿಲ್ದಾಣ ಮಾಡೋಕೆ ಮುಂದಾಗಿದ್ದೇವು. ಆದರೆ ಕಾಂಗ್ರೆಸ್​ನವರು ಅಧಿಕಾರಲ್ಲಿದ್ದಾಗ ಮಾಡಲು ಬಿಡಲಿಲ್ಲ. ಮತ್ತೆ ನಾವು ಅಧಿಕಾರಕ್ಕೆ ಬಂದು ಈಗ ಮಾಡುತ್ತಿದ್ದೇವೆ. ಶೀಘ್ರದಲ್ಲೇ ವಿಮಾನ‌ ನಿಲ್ದಾಣ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಕನಸಿನ‌ ಕೂಸು: ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ

ಶೇ 99 ರಷ್ಟು ​​ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತೆ

ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್​ ಕೈ ತಪ್ಪುವ ವಿಚಾರವಾಗಿ ಮಾತನಾಡಿದ ಅವರು ಕೆಲವೊಂದು ಕಾರಣದಿಂದ ಕೆಲವೊಬ್ಬರಿಗೆ ಟಿಕೇಟ್ ಸಿಗೋದಿಲ್ಲ. ವಿಧಾನಸಭೆ, ಲೋಕಸಭೆ ಎರಡರಲ್ಲೂ 100 ಪರ್ಸೆಂಟ್ ಟಿಕೆಟ್ ಸಿಗೋದಿಲ್ಲಾ. ಚುನಾವಣಾ ಸಮಿತಿ ಟಿಕೆಟ್​ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೆ. ಆದರೂ ಶೇ 99 ರಷ್ಟು ​​ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತೆ ಎಂದು ಹೇಳಿದರು.

ಕಾಂಗ್ರೆಸ್​​​ಗೆ ಪ್ರತಿಪಕ್ಷದ ಸ್ಥಾನದಲ್ಲಿ ಕೂರುವಷ್ಟು ಸೀಟ್​ ಬಂದರೆ ಹೆಚ್ಚು. ಕಾಂಗ್ರೆಸ್​​ನಲ್ಲಿ ಸಿಎಂಗಾಗಿ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಫೈಟ್ ಇದೆ. ಈ ವೇಳೆ ಎಂಎಲ್​ಸಿ ಲಕ್ಷ್ಮಣ ಸವದಿ ಸಾಹುಕಾರn ಎಮ್ಮೆ ಕಥೆ ಹೇಳಿ ಉದಾರಹಣೆ ನೀಡಿದರು. ನಮ್ಮ ಲಕ್ಷ್ಮಣ ಸವದಿ ಸಾಹುಕಾರ ಮನೆಯಲ್ಲಿ ಎಮ್ಮೆಗಳು ಇದ್ದವಂತೆ. ಅದರಲ್ಲಿ 2 ಎಮ್ಮೆಗಳು ಒಮ್ಮೆಲೆ ಕರು ಹಾಕಿದ್ದವಂತೆ. ಆಗ ಹುರಿ ಮೀಸೆ ಬಿಟ್ಟು ಓಡಾಡುತ್ತಿದ್ದ ವ್ಯಕ್ತಿ ಮೀಸೆ ಬೋಳಿಸಿಕೊಂಡಿದ್ದನು. ಯಾಕಂದರೆ ಸಾಹುಕಾರ ಮನೆಯಲ್ಲಿ 2 ಎಮ್ಮೆ ಹಾಲು ಕೊಡುತ್ತಿವೆ. ಹಾಲು, ಮೊಸರು ಕುಡಿಯುವಾಗ ಮೀಸೆಗೆ ತಾಗುತ್ತದೆ ಎಂದು ಮೀಸೆ ತೆಗೆದನಂತೆ. ಆದರೆ ಲಕ್ಷ್ಮಣ ಸವದಿ ಸಾಹುಕಾರ ಅವನಿಗೆ ಹಾಲು ಕೊಡಲಿಲ್ಲ. ಹಾಗಾಗಿ ಅವನಿಗೆ ಹಾಲು ಇಲ್ಲ,‌ ಮೀಸೆಯೂ ಇಲ್ಲ ಎಂಬಂತಾಯ್ತು ಕಾಂಗ್ರೆಸ್ ನಾಯಕರ ಪರಿಸ್ಥಿತಿ ಎಂದು ಕುಹಕವಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ