Karnataka Assembly Polls: ವೋಟಿಂಗ್​ಗೆ ಮೊದಲ ಬಾರಿ ಅರ್ಹರಾಗಿರುವ ಯುವಜನತೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅಪಾರ ಜನಪ್ರಿಯ!

Karnataka Assembly Polls: ವೋಟಿಂಗ್​ಗೆ ಮೊದಲ ಬಾರಿ ಅರ್ಹರಾಗಿರುವ ಯುವಜನತೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅಪಾರ ಜನಪ್ರಿಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 15, 2023 | 6:48 PM

ಪ್ರಧಾನಿ ಮೋದಿ ತಮ್ಮ ಪ್ರತಿ ಭಾಷಣದಲ್ಲಿ ಯುವಜನತೆಯ ಬಗ್ಗೆ ಮಾತಾಡುವುದು ಮತ್ತು ಅವರು ಮಾಡಿದ ಸಾಧನೆಗಳನ್ನು ಉಲ್ಲೇಖಿಸುವುದು ಅವರಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸಲು ನೆರವಾಗಿದೆ ಎಂದು ಅನೇಕರು ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ಕೇವಲ ಒಂದು ವರ್ಗಕ್ಕೆ, ಸಮುದಾಯಕ್ಕೆ, ಭಾರತ ದೇಶಕ್ಕೆ ಅಥವಾ ಒಂದು ನಿರ್ದಿಷ್ಟ ವಯೋಮಾನದ ಗುಂಪಿಗೆ ಸೀಮಿತವಾಗಿಲ್ಲ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಕರ್ನಾಟಕದಲ್ಲಿ ಮತ ಚಲಾಯಿಸಲು ಮೊದಲ ಬಾರಿಗೆ ಅರ್ಹರಾಗಿರುವ ಯುವಕರ ನಡುವೆಯೂ ಅವರ ಪಾಪ್ಯುಲಾರಿಟಿ ಅಗಾಧವಾಗಿದೆ. ನಿಮಗೆ ಗೊತ್ತಿರಬಹುದು. 2023 ರ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಸುಮಾರು 12 ಲಕ್ಷ ಯುವಕ/ಯುವತಿಯರ ಮತದಾರರ ಪಟ್ಟಿಗೆ ದಾಖಲಾಗಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಈ ಹೊಸ ಮತದಾರರು ಪ್ರಧಾನಿ ಮೋದಿಯವರ ಕಾರ್ಯವೈಖರಿಯಿಂದ ಪ್ರಭಾವಿತರಾಗಿದ್ದಾರೆ ಮತ್ತು ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಪ್ರತಿ ಭಾಷಣದಲ್ಲಿ ಯುವಜನತೆಯ ಬಗ್ಗೆ ಮಾತಾಡುವುದು ಮತ್ತು ಅವರು ಮಾಡಿದ ಸಾಧನೆಗಳನ್ನು ಉಲ್ಲೇಖಿಸುವುದು ಅವರಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸಲು ನೆರವಾಗಿದೆ ಎಂದು ಅನೇಕರು ಹೇಳಿದ್ದಾರೆ. ಯುವಜನತೆಯೊಂದಿಗೆ ಅವರು ಆಗಾಗ ನಡೆಸುವ ಸಂವಾದ, ಪರೀಕ್ಷಾ ಪೇ ಚರ್ಚಾ ಮೊದಲಾದವು ಈ ಜನಾಂಗವನ್ನು ಬಹಳ ಆಕರ್ಷಿಸಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ