ಶಿವಮೊಗ್ಗ: ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಮತ್ತು ಸಾವಿರಾರು ಕೋಟೊ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎಂದಿನಂತೆ ಇಂದೂ ಸಹ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಅವರು ಕನ್ನಡದಲ್ಲಿ ಮಾತಾಡಿದಾಗ ನೆರೆದಿದ್ದ ಸಹಸ್ರಾರು ಜನ ಖುಷಿಯಿಂದ ಕೇಕೆ ಹಾಕಿದರು. ಕುವೆಂಪು (Kuvempu) ವಿರಚಿತ ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ, ಪದ್ಯದ ಆರಂಭಿಕ ಸಾಲುಗಳನ್ನು ಹೇಳಿದ ಪ್ರಧಾನಿ ಮೋದಿಯವರು, ನಾಡಿನ ಹೆಮ್ಮೆ ಮತ್ತು ರಾಷ್ಟ್ರಕವಿಯವರ (Rashtrakavi) ಹೆಸರು ಹೇಳುತ್ತಾ ಅವರಿಗೆ ವಂದಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ