ಉಪೇಂದ್ರ ಅಭಿನಯದ ‘ರಕ್ತ ಕಣ್ಣೀರು’ ಸಿನಿಮಾದ ಡೈಲಾಗ್ಗಳನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ. ಉಪ್ಪಿ ಯಾವುದೇ ವೇದಿಕೆಗೆ ಹೋದರೂ ‘ರಕ್ತ ಕಣ್ಣೀರು’ ಚಿತ್ರದ ಡೈಲಾಗ್ ಹೊಡೆಯಲಿ ಎಂದು ಜನರು ಬಯಸುತ್ತಾರೆ. ಭಾನುವಾರ (ಫೆ.26) ಶಿಡ್ಲಘಟ್ಟದಲ್ಲಿ ‘ಕಬ್ಜ’ (Kabzaa Movie) ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಶ್ರೀಯಾ ಶರಣ್ (Shriya Saran) ಕೂಡ ಇದ್ದರು. ಅವರನ್ನು ನೋಡಿ ಉಪೇಂದ್ರ (Upendra) ಅವರು ‘ರಕ್ತ ಕಣ್ಣೀರು’ ಚಿತ್ರದ ಡೈಲಾಗ್ ಹೊಡೆದರು. ‘ನಿನ್ನ ಈ ಅಳಕು ಪಳುಕು ಕುಲುಕನ್ನು ನೋಡಿ ಮೈ ಝಳಕಾಗಿ ತುಳಕದಿಂ ತುಳುಕುತ್ತಿರುವ..’ ಎಂದು ಡೈಲಾಗ್ ಹೇಳುತ್ತಿದ್ದಂತೆಯೇ ಶ್ರೀಯಾ ಶರಣ್ ನಾಚಿ ನೀರಾದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.