Karnataka Assembly Polls; 6 ಬಾರಿ ಭಾರೀ ಬಹುಮತದೊಂದಿಗೆ ಆಯ್ಕೆಯಗಿರುವ ನನಗೆ ಟಿಕೆಟ್ ಗಾಗಿ ಹಪಹಪಿಸುವ ಸ್ಥಿತಿ ಬರಬಾರದಿತ್ತು: ಜಗದೀಶ್ ಶೆಟ್ಟರ್

Karnataka Assembly Polls; 6 ಬಾರಿ ಭಾರೀ ಬಹುಮತದೊಂದಿಗೆ ಆಯ್ಕೆಯಗಿರುವ ನನಗೆ ಟಿಕೆಟ್ ಗಾಗಿ ಹಪಹಪಿಸುವ ಸ್ಥಿತಿ ಬರಬಾರದಿತ್ತು: ಜಗದೀಶ್ ಶೆಟ್ಟರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 15, 2023 | 3:45 PM

ಪ್ರಲ್ಹಾದ್ ಜೋಶಿ ಹೈಕಮಾಂಡ್ ಪರವಾಗಿ ತಮ್ಮೊಂದಿಗೆ ಮಾತುಕತೆ ನಡೆಸಿದ್ದಾರೆಯೇ ಹೊರತು ವೈಯಕ್ತಿಕವಾಗಿ ಅಲ್ಲ ಅನ್ನೋದನ್ನು ಶೆಟ್ಟರ್ ಸ್ಪಷ್ಟಪಡಿಸಿದರು.

ಹುಬ್ಬಳ್ಳಿ: ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ (Jagadish Shettar) ತಮ್ಮ ಪಕ್ಷದ ವರಿಷ್ಠರ ವರ್ತನೆಯಿಂದ ಹತಾಶರಾಗಿದ್ದಾರೆ ಮತ್ತು ರೋಸಿಹೋಗಿದ್ದಾರೆ. ಆರು ಬಾರಿ ಭಾರಿ ಬಹುಮತದೊಂದಿಗೆ ಗೆದ್ದಿರುವ, ಶಾಸಕನಾಗಿ, ಸಚಿವನಾಗಿ ಮತ್ತು ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ತನಗೆ ಟಿಕೆಟ್ ಗಾಗಿ ದೈನೇಸಿಯಾಗುವ, ಹಪಹಪಿಸುವ ಸ್ಥಿತಿ ಬರಬಾರದಿತ್ತು ಅಂತ ಅವರು ವೇದನೆಯಿಂದ ಹೇಳುತ್ತಾರೆ. ಹುಬ್ಬಳ್ಳಿಯಲ್ಲಿಂದು ತಮ್ಮ ಬೆಂಬಲಿಗರೊಂದಿಗೆ (supporters) ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಶೆಟ್ಟರ್ ಶನಿವಾರ ಸಾಯಂಕಾಲದವರೆಗೆ ಹೈಕಮಾಂಡ್ ನಿರ್ಧಾರಕ್ಕಾಗಿ ಕಾದು ಮುಂದಿನ ನಡೆ ನಿರ್ಧರಿಸಲಾಗುವುದು ಎಂದು ಹೇಳಿದರು. ಪ್ರಲ್ಹಾದ್ ಜೋಶಿ (Pralhad Joshi) ಹೈಕಮಾಂಡ್ ಪರವಾಗಿ ತಮ್ಮೊಂದಿಗೆ ಮಾತುಕತೆ ನಡೆಸಿದ್ದಾರೆಯೇ ಹೊರತು ವೈಯಕ್ತಿಕವಾಗಿ ಅಲ್ಲ ಅನ್ನೋದನ್ನು ಶೆಟ್ಟರ್ ಸ್ಪಷ್ಟಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ