Goa Nightclub Fire: ಗೋವಾ ನೈಟ್ಕ್ಲಬ್ ಅಗ್ನಿ ದುರಂತ: ಲೂತ್ರಾ ಸಹೋದರರ ಒಡೆತನದ ಕಟ್ಟಡ ನೆಲಸಮ
ಗೋವಾದ ಅರ್ಪೋರಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್'ನಲ್ಲಿ ಅಗ್ನಿ ಅವಘಡ ಸಂಭವಿಸಿ 25 ಮಂದಿ ಸಜೀವ ದಹನವಾಗಿದ್ದರು. ಇದೆಲ್ಲಾ ಸುದ್ದಿ ಹೊರ ಬರುತ್ತಿದ್ದಂತೆ ಕ್ಲಬ್ ಮಾಲೀಕರಾದ ಗೌರವ್ ಲೂತ್ರಾ ಹಾಗೂ ಸೌರಭ್ ಲೂತ್ರಾ ಥೈಲ್ಯಾಂಡ್ಗೆ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದೀಗ ಸರ್ಕಾರದ ಆದೇಶದ ಮೇರೆಗೆ ಇಬ್ಬರು ಸಹೋದರರ ಒಡೆತನದ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ. ಸರ್ಕಾರದ ಒಡೆತನದ ಭೂಮಿಯಲ್ಲಿ ಈ ರೆಸ್ಟೋರೆಂಟ್ ಅನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು.
ಪಣಜಿ, ಡಿಸೆಂಬರ್ 10: ಗೋವಾದ ಅರ್ಪೋರಾದಲ್ಲಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ನಲ್ಲಿ ಅಗ್ನಿ ಅವಘಡ ಸಂಭವಿಸಿ 25 ಮಂದಿ ಸಜೀವ ದಹನವಾಗಿದ್ದರು. ಇದೆಲ್ಲಾ ಸುದ್ದಿ ಹೊರ ಬರುತ್ತಿದ್ದಂತೆ ಕ್ಲಬ್ ಮಾಲೀಕರಾದ ಗೌರವ್ ಲೂತ್ರಾ ಹಾಗೂ ಸೌರಭ್ ಲೂತ್ರಾ ಥೈಲ್ಯಾಂಡ್ಗೆ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದೀಗ ಸರ್ಕಾರದ ಆದೇಶದ ಮೇರೆಗೆ ಇಬ್ಬರು ಸಹೋದರರ ಒಡೆತನದ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ. ಸರ್ಕಾರದ ಒಡೆತನದ ಭೂಮಿಯಲ್ಲಿ ಈ ರೆಸ್ಟೋರೆಂಟ್ ಅನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು.
ಕಳೆದ ವಾರ ಬೆಂಕಿ ಕಾಣಿಸಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿತ್ತು. ಮಾಲೀಕರ ಒಡೆತನದ ವಾಗೇಟರ್‌ನಲ್ಲಿರುವ ಅಕ್ರಮ ‘ರೋಮಿಯೋ ಲೇನ್’ ಬೀಚ್ ಶ್ಯಾಕ್ ಅನ್ನು ಕೆಡವಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಸೌರಭ್ ಮತ್ತು ಗೌರವ್ ಲುತ್ರಾ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಗೋವಾ ಪೊಲೀಸರು ದೆಹಲಿಯ ಅಜಯ್ ಗುಪ್ತಾ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಸೌರಭ್ ಮತ್ತು ಗೌರವ್ ಅವರ ಆಪ್ತ ಸಹಚರ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ