AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಚುಚ್ಚು ಮಾತುಗಳನ್ನು ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತ ಕಾವ್ಯಾ

ಗಿಲ್ಲಿ ಚುಚ್ಚು ಮಾತುಗಳನ್ನು ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತ ಕಾವ್ಯಾ

ರಾಜೇಶ್ ದುಗ್ಗುಮನೆ
|

Updated on: Dec 10, 2025 | 8:18 AM

Share

ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಸಾಕಷ್ಟು ಗೆಳೆತನ ಇದೆ. ಆದರೆ, ಈ ಗೆಳೆತನ ಬ್ರೇಕ್ ಆಗುವ ಹಂತಕ್ಕೆ ಹೋಗಿದೆ. ಈಗ ಗಿಲ್ಲಿ ಅವರು ಕಾವ್ಯಾನ ಚುಚ್ಚು ಮಾತುಳಿಂದ ಅಳಿಸಿದ್ದಾರೆ. ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ. ಅವರು ಕಣ್ಣೀರು ಹಾಕಿದ್ದಾರೆ. ಅಂದಹಾಗೆ ಇದು ಸೀಕ್ರೆಟ್ ಟಾಸ್ಕ್. ಈ ಟಾಸ್ಕ್​ನ ಯಶಸ್ವಿಯಾಗಿ ಗಿಲ್ಲಿ ಪೂರೈಸಿದ್ದಾರೆ.

ಗಿಲ್ಲಿ ಹಾಗೂ ಕಾವ್ಯಾ ಬೆಸ್ಟ್ ಫ್ರೆಂಡ್ಸ್. ಯಾವುದೇ ಕಾರಣಕ್ಕೂ ಗಿಲ್ಲಿ ಅವರು ಕಾವ್ಯಾನ ಬಿಟ್ಟುಕೊಟ್ಟಿಲ್ಲ. ಆದರೆ, ಈಗ ಕಾವ್ಯಾ ತಮ್ಮನ್ನು ನಾಮಿನೇಷನ್ ಮಾಡಿದ ವಿಷಯವನ್ನು ಗಿಲ್ಲಿ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ಒಂದೇ ಸಮನೇ ಚುಚ್ಚುಮಾತುಗಳಿಂದ ಕಾವ್ಯಾ ಅವರನ್ನು ತಿವಿದಿದ್ದಾರೆ. ಇದರಿಂದ ಕಾವ್ಯಾ ಕಣ್ಣೀರು ಹಾಕಿದ್ದಾರೆ. ಗಿಲ್ಲಿ ಈ ರೀತಿ ಆಡೋಕೆ ಕಾರಣ ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್. ಕಾವ್ಯಾನ ಅಳಿಸಿದರೆ ಕ್ಯಾಪ್ಟನ್ಸಿ ರೇಸ್​ಗೆ ನೀವು ಆಯ್ಕೆ ಆಗೋದಾಗಿ ವಿಲನ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More