Horoscope Today 10 December: ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಸುದ್ದಿಯಿಂದ ನೋವುಂಟಾಗಲಿದೆ
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 10, ಬುಧವಾರದ ದ್ವಾದಶ ರಾಶಿಗಳ ಫಲಾಫಲ ಕುರಿತು ವಿವರಿಸಿದ್ದಾರೆ. ಅಂದು ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಷಷ್ಠಿ ತಿಥಿ ಹಾಗೂ ಮಘಾ ನಕ್ಷತ್ರ ಇರುತ್ತದೆ. ರಾಹುಕಾಲವು ಮಧ್ಯಾಹ್ನ 12:11 ರಿಂದ 1:32 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲವು ಬೆಳಗ್ಗೆ 10:46 ರಿಂದ 12:11 ರವರೆಗೆ ಇರುತ್ತದೆ.

ಇಂದು ರವಿ ವೃಶ್ಚಿಕ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಮಘಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ದಿನದಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಮೇಷ ರಾಶಿಯವರಿಗೆ ಐದು ಗ್ರಹಗಳಿಂದ ಶುಭಫಲ ದೊರೆಯಲಿದ್ದು, ಕೆಲಸ ಕಾರ್ಯಗಳಲ್ಲಿ ಶುಭವಾಗಲಿದೆ. ರಾಶ್ಯಾಧಿಪತಿ ಕುಜನು ವೃಶ್ಚಿಕದಲ್ಲಿ ಸಂಚರಿಸುವುದರಿಂದ ಕೌಶಲ್ಯದಿಂದ ಕೆಲಸ ನಿರ್ವಹಣೆ ಸಾಧ್ಯವಾಗುತ್ತದೆ. ಆದಾಯದಲ್ಲಿ ಏರಿಕೆ, ವೃತ್ತಿಯಲ್ಲಿ ಶುಭಫಲ ನಿರೀಕ್ಷಿಸಬಹುದು. ಸರ್ಕಾರಿ ನೌಕರರು, ರಾಜಕೀಯ ವ್ಯಕ್ತಿಗಳು ಮತ್ತು ವ್ಯಾಪಾರಸ್ಥರಿಗೆ ಉತ್ತಮ ದಿನವಾಗಿದೆ. ಮಕ್ಕಳು ಮತ್ತು ಅವರ ವಿವಾಹದ ವಿಷಯದಲ್ಲಿ ಶುಭ ಸಮಾಚಾರ ಸಿಗಲಿದೆ. ತಾಳ್ಮೆಯಿಂದ ಹಾಗೂ ಎಚ್ಚರಿಕೆಯಿಂದ ಇರುವುದು ಉತ್ತಮ. ಅದೃಷ್ಟ ಸಂಖ್ಯೆ 3 ಆಗಿದ್ದು, ಹಳದಿ ಬಣ್ಣವನ್ನು ಬಳಸುವುದು ಶುಭಕರ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.